ಮೈಸೂರು: ಮೈಸೂರು ರಂಗಾಯಣದ ವತಿಯಿಂದ ಒಂದು ವರ್ಷದ ರಂಗಶಿಕ್ಷಣ ತರಬೇತಿ (ಡಿಪ್ಲೋಮೊ)ಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ರಂಗ ಶಿಕ್ಷಣ ತರಬೇತಿ ಕೋರ್ಸ್‌ಗೆ ಸೇರ ಬಯಸುವ ವಿದ್ಯಾರ್ಥಿಗಳು ಅರ್ಜಿಸಲ್ಲಿಸ ಬಹುದಾಗಿದ್ದು ಕೋರ್ಸಿನ ಒಂದು ವರ್ಷದ ವ್ಯಾಸಾಂಗ ಅವಧಿಯ ಊಟ, ವಸತಿ ಹಾಗೂ ಪಠ್ಯ ಸಾಮಾಗ್ರಿಗಳ ವೆಚ್ಚವನ್ನು ವಿದ್ಯಾರ್ಥಿ ವೇತನದ ಮೂಲಕ ಭರಿಸಲಾಗುತ್ತದೆ.
ಅರ್ಹತೆಗಳು: ರಂಗಭೂಮಿಯ ಪ್ರಾಥಮಿಕ ಅನುಭವವಿರಬೇಕು. ಕನಿಷ್ಠ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿರಬೇಕು. 18 ವರ್ಷ ಮೇಲ್ಪಟ್ಟ ಹಾಗೂ 28 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
http://rangayanamysore.karnataka.gov.in ವೆಬ್‌ಸೈಟ್ ಮೂಲಕ ಅರ್ಜಿ ಪತ್ರ ಪಡೆದು, ಅಗತ್ಯ ದಾಖಲೆಯೊಂದಿಗೆ ರಂಗಾಯಣ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ 300.ರೂ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ 200.ರೂ ಡಿ.ಡಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜೂ.30 ಕೊನೆಯ ದಿನಾಂಕವಾಗಿದೆ. 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9449630465, 08122512639 ಸಂಖ್ಯೆ ಸಂಪರ್ಕಿಸಬಹುದಾಗಿದೆ.