Mysore
19
clear sky

Social Media

ಸೋಮವಾರ, 02 ಫೆಬ್ರವರಿ 2026
Light
Dark

ಭೂ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ

Protest by pouring cow dung

ಪಿರಿಯಾಪಟ್ಟಣ: ಕಳೆದ ಮೂರು ವರ್ಷಗಳಿಂದ ತಾಲೂಕು ಆಡಳಿತದ ಮುಂಭಾಗ ತಾಲ್ಲೂಕಿನ ಭೂ ಸಮಸ್ಯೆ ಸೇರಿದಂತೆ ಇತರೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಸಮಸ್ಯೆ ಬಗೆಹರಿಸಲು ನಿರ್ಲಕ್ಷ ವಹಿಸುತ್ತಿರುವ ತಾಲೂಕು ಆಡಳಿತದ ವಿರುದ್ಧ ಪ್ರತಿಭಟನಾ ನಿರತರು ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದ ಪ್ರಕರಣ ಜರುಗಿದೆ.

ತಾಲೂಕು ಆಡಳಿತದ ಮುಂಭಾಗ ಕಳೆದ ಮೂರು ವರ್ಷಗಳಿಂದ ದಸಂಸ ಮುಖಂಡ ಸಿ.ಎಸ್. ಜಗದೀಶ್ ಮತ್ತು ಮುಮ್ಮಡಿ ಕಾವಲ್ ದೊಡ್ಡಯ್ಯ ನೇತೃತ್ವದಲ್ಲಿ ತಾಲೂಕಿನ ದಲಿತರ ಮತ್ತು ರೈತರ ಭೂ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಆಗಿರುವ ಭ್ರಷ್ಟಚಾರವನ್ನು ತಡೆಗಟ್ಟುವಂತೆ ಪ್ರತಿಭಟನಾ ಧರಣಿ ಮಾಡಲಾಗುತ್ತಿದೆ.

ತಾಲ್ಲೂಕಿನ ದೊಡ್ಡ ಹೊಸೂರು ಗ್ರಾಮದ ವಿಧವೆ ಚೆನ್ನಮ್ಮ ರವರಿಗೆ ಪಿಟಿಸಿಎಲ್ ಕಾಯ್ದೆಯಡಿ ಆದೇಶವಾಗಿರುವ ಭೂಮಿಯ ಸಮಸ್ಯೆಯನ್ನು ಬಗೆಹರಿಸಬೇಕು. ಚನ್ನಕಲ್ ಕಾವಲು ಗ್ರಾಮದ ಸರ್ವೇ ನಂಬರ್ 1 ಮತ್ತು 3ರ ಭೂಮಿ ಸಮಸ್ಯೆ ಬಗೆಹರಿಸಬೇಕು ಮತ್ತು ಸೂಳೆಕೋಟೆ ಸರ್ವೆ ನಂಬರ್ 10 ರ ದಾಖಲಾತಿಗಳನ್ನು ತಿರುಚಿದವರ ಮೇಲೆ ಕಾನೂನು ಕ್ರಮವಾಗಬೇಕು ಹಾಗೂ ಕೊಣಸೂರು ಗ್ರಾಮದ ಸರ್ವೇ ನಂಬರ್ 138 ಮತ್ತು 93ರ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರಿಗೆ ಸಾಗುವಳಿ ಮಂಜೂರು ಮಾಡಿಸಿ, ಕೊಪ್ಪ ಗೆರಾಸಿಯ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಗಿರಿಜನರಿಗೆ ನಿವೇಶನಗಳನ್ನು ವ್ಯವಸ್ಥೆ ಮಾಡಿಸಬೇಕು ಎಂಬುದು ಪ್ರತಿಭಟನಾ ನಿರತರ ಒತ್ತಾಯವಾಗಿದೆ.

ಸರ್ಕಾರ ಹಾಗೂ ಉಚ್ಚ ನ್ಯಾಯಾಲಯವು ಧರಾಖಸ್ತು ಮೂಲಕ ಬಂದಂತಹ ಜಮೀನನ್ನು ಪಕ್ಕ ಪೋಡು ದುರಸ್ತಿ ಸಂಬಂಧ ಪಕ್ಕಪೋಡು ದುರಸ್ತಿ ಮಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಆದೇಶ ಮಾಡಿ ವರ್ಷಗಳೇ ಕಳೆದಿದೆ.ಆದರೆ ಈ ಆದೇಶಗಳನ್ನು ಗಾಳಿಗೆ ದೂರಿ ದಲಿತರಿಗೆ, ರೈತರಿಗೆ ಅಧಿಕಾರಿ ವರ್ಗ ತೊಂದರೆ ನೀಡುತ್ತಿದ್ದಾರೆ. ಇದರಿಂದ್ದಾಗಿ ನಮ್ಮಗಳ ಹೆಸರಿಗೆ ದಾಖಲೆ ಮಾಡಿಸಿಕೊಳ್ಳಲು ಆಗದೆ, ಹಂಚಿಕೆ ಮಾಡಿಕೊಳ್ಳಲು ಆಗದೆ ಸಂಕಷ್ಟ ಅನುಭವಿಸಬೇಕಾಗಿದೆ ಹಾಗೂ ಪ್ರಭಾವಿಗಳು ಸರ್ಕಾರಿ ಕೆರೆ ಕಟ್ಟೆ ಗೋಮಾಳ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಕಣ್ಣಿಗೆ ಕಂಡರೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ನಮ್ಮ ಹೋರಾಟದ ಬೇಡಿಕೆಗಳನ್ನು ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆಗೆ ಆಗಮಿಸುತ್ತಿರುವ ಮುಖಮಂತ್ರಿ, ಸಚಿವರಿಗೆ ಮನವರಿಕೆ ಮಾಡಿಕೊಡಲು ಅವಕಾಶ ಕಲ್ಪಿಸುವಂತ್ತೆ ತಹಸೀಲ್ದಾರ್ ನಿಸರ್ಗ ಪ್ರಿಯಾ ರವರನ್ನು ಕೇಳಿದರೆ ಅವಕಾಶ ನಿರ್ಲಕ್ಷಿಸಿ ರೈತ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮೂರ್ತಿ ಕದರೇಗೌಡ ಕೊಪ್ಪಲು, ವಾಸುರ, ಕೃಷ್ಣ, ರಾಮಚಂದ್ರ, ಮುಮ್ಮಡಿಕಾವಲ್, ಕೃಷ್ಣ ಮೂರ್ತಿ, ನಾರಾಯಣ ಕೆ. ಬಸವನಳ್ಳಿ,ರಾಜಯ್ಯ ತರಿಕಲ್ ಕಾಲೋನಿ,ಮಹಾದೇವಮ್ಮ ಭಾಗವಹಿಸಿದ್ದರು.

Tags:
error: Content is protected !!