Mysore
34
clear sky

Social Media

ಸೋಮವಾರ, 04 ಮೇ 2026
Light
Dark

ಮೈಸೂರು| ಪರಮೇಶ್ವರ್‌ಗೆ ಮುಂದೆ ಅತ್ಯುನ್ನತ ರಾಜಕೀಯ ಸ್ಥಾನಮಾನ ಸಿಗಲಿ: ಎಚ್.ಎ.ವೆಂಕಟೇಶ್‌

ಮೈಸೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಮುಂದೆ ಅತ್ಯುನ್ನತ ರಾಜಕೀಯ ಸ್ಥಾನಮಾನ ಸಿಗಲಿ ಎಂದು ಕೆಪಿಸಿಸಿ ವಕ್ತಾರ ಎಚ್.‌ಎ.ವೆಂಕಟೇಶ್‌ ಹೇಳಿದರು. ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು.

ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪರಮೇಶ್ವರ್‌ ಅವರಿಗೆ ಒಳಿತಾಗುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್‌ ಅವರು, ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಧೀಮಂತ ಆಡಳಿತಗಾರ, ಎಲ್ಲರೊಳಿತಿನ ರಾಜಕಾರಣಕ್ಕೆ ಹೆಸರಾದವರು. ತಮಗೆ ವಹಿಸಿದ ಎಲ್ಲಾ ಖಾತೆಗಳ್ನನು ಜವಾಬ್ದಾರಿಯಿಂದ ಸಮರ್ಥವಾಗಿ ನಿಭಾಯಿಸುವರು. ಮುಂದಿನ ದಿನಗಳಲ್ಲಿ ಅವರಿಗೆ ಅತ್ಯುನ್ನತ ರಾಜಕೀಯ ಸ್ಥಾನಮಾನ ಹಾಗೂ ಆಡಳಿತದ ನಾಯಕತ್ವ ದಕ್ಕಲಿ ಎಂದು ನಮ್ಮ ಆಶಯ ಎಂದು ಹೇಳಿದರು.

Tags:
error: Content is protected !!