Mysore
20
overcast clouds
Light
Dark

ಅದ್ದೂರಿಯಾಗಿ ನಡೆದ ನಂಜನಗೂಡು ಪಂಚ ಮಹಾರಥೋತ್ಸವ!

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ (ಮಾರ್ಚ್ 22) ಅದ್ಧೂರಿಯಾಗಿ ಪಂಚ ಮಹಾರಥೋತ್ಸವ ನೆರವೇರಿತು. ಲಕ್ಷಾಂತರ ಮಂದಿ ಭಕ್ತರು ಬೇರೆ-ಬೇರೆ ಊರುಗಳಿಂದ ಆಗಮಿಸಿ ದೇವರ ದರ್ಶನಕ್ಕೆ ಪಾತ್ರರಾದರು.

ಇಂದು ಬೆಳಿಗ್ಗೆ 6:30 ರಿಂದ 6:50ರ ಒಳಗಿನಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.

ನಂಜನಗೂಡಿನ ದೇವಸ್ಥಾನದ ಬೀದಿ ಮಾತ್ರವಲ್ಲ, ಪ್ರಮುಖ ರಸ್ತೆಗಳಲ್ಲಿ ಕೂಡಾ ರಥ ಸಾಗಿ ಬಂತು ದೇವಸ್ಥಾನ ಸೇರಿತು. ಈ ಸಮಯದಲ್ಲಿ ಲಕ್ಷಾಂತರ ಜನರು ರಥಗಳ ಮೇಲೆ ಹಣ್ಣು ಜವನವನ್ನು ಎಸೆದು ಭಕ್ತಿಭಾವ ಮೆರೆದರು.

ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಬೃಹತ್ ರಥ ಸುಮಾರು 108 ಅಡಿ ಎತ್ತರವಿದ್ದು 110 ಟನ್ ತೂಕವಿದೆ. ಈ ಬೃಹತ್ ರಥವನ್ನು ಹರ್ಷೋದ್ಗಾರಗಳ ನಡುವೆ ಎಳೆಯುವ ಮೂಲಕ ಭಕ್ತರು ಪುನೀತರಾದರು.

Tags: