Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

GRS ಯಂತ್ರದಲ್ಲಿ ಲೋಪ ; ವ್ಯಕ್ತಿಯೊಬ್ಬರ ಎರಡು ಬೆರಳು ಕಟ್ : ಎಫ್‌ಐಆರ್‌ ದಾಖಲು

ಮೈಸೂರು : ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಆಟಗಳಲ್ಲಿ ಲೋಪ ಕಂಡು ಬಂದ ಹಿನ್ನಲೆ ವ್ಯಕ್ತಿಯೊಬ್ಬರ ಕಾಲು ಯಂತ್ರಗಳ ಮಧ್ಯೆ ಸಿಲುಕಿ ಎರಡು ಬೆರಳುಗಳನ್ನ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.

ದೆಹಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಅಸೆಸರ್ ವಿಶಾಂತ್ ಯಾದವ್ ಬೆರಳುಗಳನ್ನ ಕಳೆದುಕೊಂಡವರು. ಶಾಶ್ವತ ಅಂಗವಿಕಲರಾದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳುವಂತೆ ವಿಶಾಂತ್ ಯಾದವ್ ಅವರು GRS ಫ್ಯಾಂಟಸಿ ಪಾರ್ಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನರಲ್ ಮ್ಯಾನೇಜರ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ: ಮಡಿಕೇರಿ | ಮನೆಗಳವು ಮಾಡಿದ್ದ ಖದೀಮರು ಬಂಧನ

ಅಕ್ಟೋಬರ್ ನಲ್ಲಿ ಮೈಸೂರಿಗೆ ಬಂದಿದ್ದ ವಿಶಾಂತ್ ಯಾದವ್ ಅವರು ತಮ್ಮ ಸಹೋದರನ ಜೊತೆ GRS ಫ್ಯಾಂಟಸಿ ಪಾರ್ಕ್ ಗೆ ಆಟವಾಡಲು ತೆರಳಿದ್ದಾರೆ. ಈ ವೇಳೆ ಸೂಪರ್ ಡ್ರಾಪರ್ ವಾಟರ್ ಸ್ಲೈಡರ್ ನಲ್ಲಿ ಆಟವಾಡುವ ವೇಳೆ ಯಂತ್ರದ ಮಧ್ಯೆ ಕಾಲುಗಳು ಸಿಲುಕಿವೆ. ತೀವ್ರ ಗಾಯಗೊಂಡ ವಿಶಾಂತ್ ಯಾದವ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ವಿಶಾಂತ್ ಯಾದವ್ ಎರಡು ಬೆರಳುಗಳನ್ನ ಶಾಶ್ವತವಾಗಿ ಕಳೆದುಕೊಂಡಿದ್ದಾರೆ. ಸುರಕ್ಷಾ ಕ್ರಮ ಅನುಸರಿಸದೆ ದೋಷಪೂರಿತ ಯಂತ್ರದಿಂದಾಗಿ ತಾವು ಶಾಶ್ವತ ಅಂಗವಿಕಲನಾಗಬೇಕಾಯ್ತು ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವಂತೆ ಎಂಡಿ ಹಾಗೂ ಜಿಎಂ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

Tags:
error: Content is protected !!