ನಂಜನಗೂಡು : ನಂಜುಡಪ್ಪ ಗೂಳಿ ಅಂತಲೇ ಪ್ರಸಿದ್ದಿಯಾಗಿದ್ದ ಹರಕೆಯ ಗೂಳಿಯೊಂದು ಸಾವನ್ನಪ್ಪಿದೆ.
ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಸುತ್ತಮುತ್ತ ಇದ್ದ ಈ ಹರಕೆಯ ಗೂಳಿ ಪ್ಲಾಸ್ಟಿಕ್ ಸಹಿತ ಬಿಸಾಡಿದ ಪ್ರಸಾದ ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಕ್ತವಾಗಿದೆ.
ನಂಜುಡಪ್ಪ ಗೂಳಿಯು ಪ್ರತಿ ನಿತ್ಯ ಅಂಗಡಿ ಮನೆಗಳಿಗೆ ತೆರಳುತ್ತಿತ್ತು. ಸಾರ್ವಜನಿಕರು ಗೂಳಿಗೆ ಹಣ್ಣು, ಬೆಲ್ಲ, ಕಲಗಚ್ಚು, ನೀರು, ತರಕಾರಿ ನೀಡುತ್ತಿದ್ದರು. ಆದರೆ, ಇದೀಗ ಸಾವನ್ನಪ್ಪಿರುವ ಗೂಳಿಗೆ ಸ್ಥಳೀಯರು ಮರುಗಿದ್ದಾರೆ.
ನಂಜನಗೂಡು ಯುವ ಬ್ರಿಗೇಡ್ ಹಾಗೂ ಸಾರ್ವಜನಿಕರಿಂದ ಕಪಿಲಾ ನದಿ ತೀರದಲ್ಲಿ ಸಾಂಪ್ರದಾಯಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಈ ವೇಳೆ ದೇವಾಲಯಕ್ಕೆ ಬರುವ ಜನರು ಪ್ಲಾಸ್ಟಿಕ್ ಬಳಸದಂತೆ ಮನವಿ ಮಾಡಿದರು.
ಇದನ್ನೂ ಓದಿ:- ಮೈಸೂರು ವಿ.ವಿ | ಅಪ್ರಕಟಿತ ಹಸ್ತಪ್ರತಿ ಕೃತಿ ಕುರಿತು ಒಡಂಬಡಿಕೆ





