Mysore
25
broken clouds

Social Media

ಶುಕ್ರವಾರ, 25 ಏಪ್ರಿಲ 2025
Light
Dark

ನಾಗರಹೊಳೆ: ಹುಲಿಯನ್ನೇ ಅಟ್ಟಾಡಿಸಿದ ಸೀಳು ನಾಯಿಗಳು

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ಹುಲಿಯನ್ನು ಸೀಳು ನಾಯಿಗಳು ಅಟ್ಟಾಡಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ನಾಗರಹೊಳೆಯ ರಾಜೀವ್‌ ಗಾಂಧಿ ನ್ಯಾಷನಲ್‌ ಪಾರ್ಕ್‌ನಲ್ಲಿ ಇಂದು(ಮಾರ್ಚ್‌.23) ನಾಲ್ಕೈದು ಸೀಳು ನಾಯಿಗಳು ಹುಲಿಯನ್ನು ಅಟ್ಟಾಡಿಸಿವೆ.

ಇದೇ ವೇಳೆ ಹುಲಿಯೇ ಅಟ್ಟಾಡಿಸಿಕೊಂಡು ಬಂದ ಸೀಳು ನಾಯಿಗಳನ್ನು ಓಡಿಸಿದೆ. ಈ ದೃಶ್ಯವೂ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್‌ ಫೋನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಇದೀಗ ಆ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

Tags: