ಮೈಸೂರು: ರಾಜ್ಯದಲ್ಲಿ ಕಳೆದ ಫೆಬ್ರವರಿ ತಿಂಗಳಿನಿಂದ ತಾಪಮಾನ ತೀವ್ರ ಏರಿಕೆ ಕಂಡಿದ್ದು, ಜನತೆ ಹೈರಾಣಾಗಿದ್ದಾರೆ. ಈ ಬೆನ್ನಲ್ಲೇ ಕಾಡು ಪ್ರಾಣಿಗಳೂ ಸಹ ಮಧ್ಯಾಹ್ನದ ವೇಳೆಗೆ ಕೆರೆ ಹಾಗೂ ನದಿಗಳಿಗೆ ಇಳಿದು ದೇಹ ತಂಪಾಗಿಸಿಕೊಳ್ಳುತ್ತಿವೆ.
ನಾಗರಹೊಳೆ ಉದ್ಯಾನವನದಲ್ಲಿ ಹುಲಿಯೊಂದು ನೆತ್ತಿ ಸುಡುತ್ತಿರುವ ಬಿಸಿಲನ್ನು ತಾಳಲಾರದೇ ನೀರಿನಲ್ಲಿ ಮಲಗಿದೆ. ಈ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಸೆರೆ ಸಿಕ್ಕಿದ್ದು, ನೀರಿನಲ್ಲಿ ಆಟವಾಡುತ್ತಿರುವ ಹುಲಿಯನ್ನು ಕಂಡು ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ನೀರಿನಲ್ಲಿ ಕೆಲ ಸಮಯ ಕಳೆದ ಬಳಿಕ ಹುಲಿ ಘರ್ಜನೆ ಮಾಡಿಕೊಂಡು ಕೆರೆಯಿಂದ ತೆರಳಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.