ಮೈಸೂರು : ಇಲ್ಲಿನ ಅಂಬಾವಿಲಾಸ ಅರಮನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭೇಟಿ ನೀಡುವ ಹಿನ್ನೆಲೆ ಸೆ.2 ರಂದು ಅರಮನೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಸೆ.1 ರಂದು ಮೈಸೂರಿಗೆ ಬರಲಿರುವ ಮುರ್ಮು ಅವರು, ಸೆ.2 ರಂದು ಬೆಳಿಗ್ಗೆ 8.50 ಕ್ಕೆ ಅರಮನೆಗೆ ಭೇಟಿ ನೀಡಿ, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ಆತಿಥ್ಯ ಸ್ವೀಕರಿಸಲಿದ್ದಾರೆ.
ಹೀಗಾಗಿ ಭದ್ರತೆಯ ಹಿತದೃಷ್ಟಿಯಿಂದ ಮತ್ತು ಶಿಷ್ಟಾಚಾರ ಪಾಲನೆ ಸಲುವಾಗಿ ಸೆ.1 ರ ಕಾರ್ಯಕ್ರಮ ರದ್ದಾಗಿದೆ ಜೊತೆಗೆ ಸೆ.2 ರಂದು ಬೆಳಿಗ್ಗೆ 11.30 ರವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿ ಪ್ರಕಟಣೆ ತಿಳಿಸಿದೆ.





