Mysore
23
scattered clouds

Social Media

ಗುರುವಾರ, 30 ಏಪ್ರಿಲ 2026
Light
Dark

ಮೈಸೂರು | ಚಿತ್ರನಗರಿಯ ಕಾಮಗಾರಿಗೆ ಭೂಮಾಲೀಕ ರೈತರಿಂದ ತಡೆ

ಮೈಸೂರು : ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ ಉದ್ದೇಶಿತ ಚಿತ್ರನಗರಿಯ ಕಾಮಗಾರಿಗೆ ತಡೆಯೊಡ್ಡಿದ ರೈತರು ಅಲ್ಲಿನ ಕೆಲಸವನ್ನು ಸ್ಥಗಿತಗೊಳಿಸಿದರು. ಚಿತ್ರನಗರಿಗಾಗಿ ಭೂಮಿ ಕಳೆದಕೊಂಡ ರೈತರು ತಮಗೆ ನ್ಯಾಯಯುತವಾಗಿ ಬರಬೇಕಾಗಿದ್ದ ಪರಿಹಾರಕ್ಕಾಗಿ ೧೩೫ ದಿನಗಳಿಂದ ನಡಸುತ್ತಿದ್ದ ಶಾಂತಿಯುತ ಪ್ರತಿಭಟನೆಗೆ ಶನಿವಾರ ತಿರುವು ನೀಡಿ, ಅಲ್ಲಿನ ಕಾಮಗಾರಿಗೆ ತಡೆಯೊಡ್ಡಿ ಕೆಲಸ ಸ್ಥಗಿತಗೊಳಿಸಿ ಕಾರ್ಮಿಕರನ್ನು ವಾಪಸ್ ಕಳಿಸಿದರು.

ತಾವು ಕಳೆದಕೊಂಡ ಭೂಮಿಗೆ ಸರ್ಕಾರ ಬಿಡುಗಡೆ ಮಾಡಿದ ೧೮ ಕೋಟಿ ರೂ. ಪರಿಹಾರ ಅಧಿಕಾರಿಗಳ ಚಿತಾವಣೆಯಿಂದಾಗಿ ಅನ್ಯರ ಪಾಲಾಗಿದ್ದು, ತಮಗೆ ಪರಿಹಾರಬೇಕೇ ಬೇಕು ಎಂದು ೧೩೫ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಈ ಪರಿಹಾರದ ವಿತರಣೆಯ ಕುರಿತು ಜಿಲ್ಲಾಧಿಕಾರಿಗಳು ತನಿಖಾ ತಂಡ ರಚಿಸಿ ವಾರದೊಳಗೆ ನ್ಯಾಯ ಕೊಡಿಸುವುದಾಗಿ ಹೇಳಿ ತಿಂಗಳೂ ಕಳೆದರೂ ಪರಿಹಾರ ದೊರಕಿಲ್ಲ, ತನಿಖಾ ಸಮಿತಿಯ ವರದಿಯೂ ಹೊರಬಂದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ರಾಜ್ಯ ರೈತ ಸಂಘದ ನೇತೃತ್ವಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮುಖಂಡರು, ಶಾಂತ ರೀತಿಯ ಪ್ರತಿಭಟನೆಗೆ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸಿ ಪರಿಹಾರ ರೂಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅಲ್ಲಿ ನಡೆಯುತ್ತಿದ್ದ ಕಾಂಪೌಂಡ್ ನಿರ್ಮಾಣದ ಕೆಲಸಕ್ಕೆ ಶನಿವಾರ ತಡೆಯೊಡ್ಡಿದರು. ಇದರ ಪರಿಣಾಮ ೩೦ ಕ್ಕೂ ಹೆಚ್ಚು ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸಿ ವಾಪಸಾದರು. ಈ ಮೂಲಕ ಚಿತ್ರ ನಗರಿಯ ಪರಿಹಾರದ ಪ್ರತಿಭಟನೆ ೧೩೬ನೇ ದಿನ ಇನ್ನೊಂದು ಮಜಲು ತಲುಪಿದಂತಾಗಿದೆ.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶೀ ಪಿ.ಮರಂಕಯ್ಯ, ಪ್ರೇಮರಾಜ್, ಸಂಘದ ಯುವ ಘಟಕದ ಅದ್ಯಕ್ಷ ಶ್ರೀಕಂಠ, ಭೂಮಾಲೀಕರಾದ ಸಂತೋಷ, ಪ್ರಕಾಶ, ಬಸಪ್ಪ, ರಾಜಣ್ಣ, ವೆಂಕಟೇಗೌಡ, ವಾಸು, ಕಳಸಮ್ಮ ಮಂಗಳಮ್ಮ, ಮಂಜುಳ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.

Tags:
error: Content is protected !!