Mysore
27
scattered clouds

Social Media

ಮಂಗಳವಾರ, 16 ಜೂನ್ 2026
Light
Dark

ಹನೂರು| ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಳೆ ನಾಶ: ಕಂಗಾಲಾದ ರೈತರು

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಬಿರುಗಾಳಿ ಸಹಿತ ಮಳೆಗೆ ಹಲವಾರು ರೈತರು ಬೆಳೆದಿದ್ದ 50ಕ್ಕೂ ಹೆಚ್ಚು ಎಕರೆ ಬಾಳೆ, ಟಮೋಟೊ ಗಿಡಗಳು ಸಂಪೂರ್ಣ ನೆಲಕಚ್ಚಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಮಿಣ್ಯಂ ಗ್ರಾಮದಲ್ಲಿ ಜರುಗಿದೆ.

ಗುರುವಾರ ಮಧ್ಯಾಹ್ನ ಪ್ರಾರಂಭವಾದ ಬಿರುಗಾಳಿ ಸಹಿತ ಭಾರಿ ಮಳೆಗೆ ಮಾದೇಶ್, ಗೋವಿಂದೇಗೌಡ, ಪ್ರಭು, ನಾಗಮಲೆ, ಕೃಷ್ಣ, ಮುತ್ತುರಾಜುರವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು, ಸಿದ್ದಯ್ಯರವರ ಜಮೀನಿನಲ್ಲಿ ಬೆಳೆದಿದ್ದ ಟಮೋಟೋ ಬೆಳೆ ಸಹ ಉದುರಿ ನೆಲಕಚ್ಚಿದೆ. ಇದರಿಂದ ರೈತರು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಪ್ರಭುಸ್ವಾಮಿ ಎಂಬುವರ ಜಮೀನಿನಲ್ಲಿ ಬೆಳೆಯಲಾಗಿದ್ದ ಗೊನೆ ಬಿಟ್ಟಿದ್ದ 700ಕ್ಕೂ ಹೆಚ್ಚು ಬಾಳೆಗಿಡಗಳು ಸಂಪೂರ್ಣವಾಗಿ ಬುಡ ಸಮೇತ ನೆಲ ಕಚ್ಚಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು ರೈತ ಪ್ರಭುಸ್ವಾಮಿರವರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಸಂಕಷ್ಟದಲ್ಲಿ ರೈತ ಪ್ರಭುಸ್ವಾಮಿ: ಪ್ರಭುಸ್ವಾಮಿ ರವರು ಪ್ರತಿ ಬಾರಿಯೂ ಬಾಳೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಪ್ರಕೃತಿ ವಿಕೋಪಕ್ಕೆ ಬಾಳೆ ಗಿಡ ನೆಲಕಚ್ಚಿದೆ. ಇದರಿಂದ ಸಾಲ ತೀರಿಸಲಾಗದೆ ವಿಡಿಯೋನಲ್ಲಿ ತಮ್ಮ ಕಷ್ಟದ ಜೀವನದ ಬಗ್ಗೆ ಅಳಲನ್ನು ತೋಡಿಕೊಂಡಿದ್ದಾರೆ.

ಎರಡು ಬಾರಿಯೂ ಪರಿಹಾರ ದೊರೆತಿಲ್ಲ : ರೈತ ಪ್ರಭುಸ್ವಾಮಿರವರು ಕಷ್ಟಪಟ್ಟು ತಮ್ಮ ಜಮೀನಿನಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಒಂದು ಬಾರಿ ಆನೆ ದಾಳಿಯಿಂದ ಬಾಳೇ ಫಸಲು ನಾಶವಾದರೆ ಮತ್ತೊಮ್ಮೆ ಗಾಳಿ ಮಳೆಗೆ ಬಾಳೆಗೊನೆಗಳು ನೆಲಕ್ಕೆ ಕಚ್ಚಿತ್ತು. ಎರಡು ಬಾರಿ ಬಾಳೆಗೊನೆ ನಷ್ಟವಾಗಿದ್ದರು ಇದುವರೆಗೂ ಅಧಿಕಾರಿಗಳು ಇವರಿಗೆ ಪರಿಹಾರ ನೀಡಿಲ್ಲ ಇದೀಗ ಮತ್ತೊಮ್ಮೆ ಬಾಳಿಪಸಲು ಗಾಳಿ ಮಳೆಗೆ ಸಂಪೂರ್ಣ ನಾಶವಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದ ಮರ: ಗುರುವಾರ ಮಧ್ಯಾಹ್ನ ಬಿದ್ದ ಬಿರುಗಾಳಿ ಸಹಿತ ಮಳೆಗೆ ಮರ ಒಂದು ವಿದ್ಯುತ್ ಕಂಬದ ತಂತಿಯ ಮೇಲೆ ಬಿದ್ದು ವಿದ್ಯುತ್ ಸ್ಥಗಿತಗೊಂಡಿದೆ.

Tags:
error: Content is protected !!