ಮೈಸೂರು : ದಸರಾ ಮಹೋತ್ಸವವನ್ನು ಸೆ.22ರಿಂದ ಅ.2ರವರೆಗೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರವು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ದಸರಾ ಕುರಿತಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸುವ ಉದ್ದೇಶಕ್ಕಾಗಿ ದಸರಾ ಕುರಿತ ಅಧಿಕೃತ ಜಾಲತಾಣವನ್ನು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾರ್ವಜನಿಕರ ಬಳಕೆಗೆ ಅನಾವರಣಗೊಳಿಸಿದ್ದಾರೆ.
2025ನೇ ನಾಡಹಬ್ಬ ದಸರಾ ಮಹೋತ್ಸವ ಸಂಬಂಧ ದಸರಾ ಕಾರ್ಯಕಾರಿ ಸಮಿತಿ, ದಸರಾ ಉಪ ಸಮಿತಿಗಳು, ದಸರಾ ಕಾರ್ಯಕ್ರಮಗಳ ವಿವರ ಮತ್ತು ಜಂಬೂಸವಾರಿ, ಪಂಜಿನ ಕವಾಯತು ಕಾರ್ಯ ಕ್ರಮಗಳ ಟಿಕೆಟ್ ಖರೀದಿಗಾಗಿ ಸಾರ್ವಜನಿಕರು ಅಧಿಕೃತ ದಸರಾ ಜಾಲತಾಣ https://mysoredasara.gov.in ಕ್ಕೆ ಭೇಟಿ ನೀಡಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ದಸರಾ ಉಪ ವಿಶೇಷಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹೇಳಿದ್ದಾರೆ.





