ಮೈಸೂರು: ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿ, ಚಿನ್ನದ ಪದಕ ಮತ್ತು ನಗದು ಬಹುಮಾನ ಪಡೆಯುವಲ್ಲಿ ವಿದ್ಯಾರ್ಥಿನಿಯರೇ ಪ್ರಾಬಲ್ಯ ಮೆರೆದಿದ್ದಾರೆ.
ಶನಿವಾರ ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ನಡೆದ 105ನೇ ಘಟಿಕೋತ್ಸವದಲ್ಲಿ ಮಹಿಳಾ ಮೇಲುಗೈ ಕಂಡು ಬಂತು. ಪದವಿ ಗಳಿಸಿದ 31,689 ಅಭ್ಯರ್ಥಿಗಳ ಪೈಕಿ 20,222 ವಿದ್ಯಾರ್ಥಿನಿಯರು. 304 ಪಿಎಚ್‌ಡಿ ಪದವಿದರರಲ್ಲಿ 139 ಮಹಿಳೆಯರು. ಒಟ್ಟು 413 ಚಿನ್ನದ ಪದಕದಲ್ಲಿ 139 ವಿದ್ಯಾರ್ಥಿಗಳು ಹೆಚ್ಚಿನ ಪಾಲು ತಮ್ಮದಾಗಿಸಿಕೊಂಡರು.
ಚಿನ್ನದ ಹುಡುಗಿಯರು ಇವರು…
ಚಿನ್ನದ ಹುಡುಗಿ ಭೂಮಿಕ
ರಸಾಯನ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಮಾನಸಗಂಗೋತ್ರಿಯ ಎಂ.ಆರ್ ಭೂಮಿಕ 1 8ಚಿನ್ನದ ಪದಕ, 4 ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡರು. ಅಪ್ಪ ಅಮ್ಮ ಕನಸಿನಂತೆ ಕ್ರಾಫರ್ಡ್ ಭವನದಲ್ಲಿ ಸನ್ಮಾನಿತೆಯಾಗಿದ್ದೇನೆ. ಆದರೆ ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅಪ್ಪ ಈಗ ಇಲ್ಲ ಎಂದು ಭೂಮಿಕ ಹೇಳಿದರು. ಮದ್ರಾಸ್ ಐಐಟಿಯಲ್ಲಿ ಪಿಎಚ್‌ಡಿ ಮಾಡಬೇಕು, ಐಎಎಸ್ ಅಧಿಕಾರಿ ಆಗಬೇಕು ಎಂಬ ಆಸೆ ಇದು ಎಂದು ತಮ್ಮ ಕನಸನ್ನು ಹಂಚಿಕೊಂಡರು.
ಮಂಗಳೂರಿನ ಕಾವ್ಯಶ್ರೀ
ಅರ್ಬಲ್ ಅಂಡ್ ರೀಜನಲ್ ಪ್ಲಾನಿಂಗ್ ವಿಷಯದಲ್ಲಿ 16 ಚಿನ್ನದ ಪದಕ ಪಡೆದ ಮಂಗಳೂರಿನ ಯು.ಎ ಕಾವ್ಯಶ್ರೀ ಪದವಿಯಲ್ಲೂ ಚಿನ್ನದ ಪದಕ ಬೇಟೆಯಾಡಿದ್ದರು.
ವಿವಿನ ಸಾಧನೆ
ಎಂಎಸ್ಸಿ ಸಸ್ಯಶಾಸ್ತ್ರದಲ್ಲಿ 10 ಚಿನ್ನದ ಪದಕ ಹಾಗೂ 2 ನಗದು ಬಹುಮಾನ ತಮ್ಮದಾಗಿಸಿಕೊಂಡ ವಿವಿನ ಸ್ವೀಡಲ್ ಥೋರಸ್ ಕೊಡಗಿನ ಗೋಣಿಕೊಪ್ಪದವರು. ಪಿಎಚ್‌ಡಿ ಪದವಿ ಪಡೆಯಬೇಕು. ಶಿಕ್ಷಕಿಯಾಗಬೇಕು ಎಂದು ತನ್ನ ಕನಸಿನ ಆಸೆ ಬಿಚ್ಚಿಟ್ಟರು.
ಕಾಸರಗೋಡಿನ ಸೀಮಾ
ಕೇರಳದ ಕಾಸರಗೋಡಿನ ಸೀಮಾ ಹೆಗೆಡೆ ಸಂಸ್ಕೃತ ವಿಷಯದಲ್ಲಿ 13 ಚಿನ್ನದ ಪದಕ ಮತ್ತು 1 ನಗದು ಬಹುಮಾನ ಗಳಿಸಿದ್ದಾರೆ. ಕೃಷಿಕ ಕುಟುಂಬದಲ್ಲಿ ಜನಿಸಿದ ಈಕೆ ಭಗವದ್ಗೀತೆಯ ಹಾಡುಗಾರ್ತಿಯೂ ಹೌದು. ಶಿಕ್ಷಕಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಗುರಿ ಇದೆ ಎಂದು ಹೇಳಿದರು.
ಕುಣಿಗಲ್ ಕಾವ್ಯ
ಎಚ್.ಡಿ ಕೋಟೆಯ ಕುಣಿಗಲ್ ಗ್ರಾಮದ ಕೊಲಿ ಕೆಲಸಗಾರ ಚಿಕ್ಕನಾಯಕ-ದೇವಾಲಮ್ಮ ಪುತ್ರಿ ಸಿ.ಕಾವ್ಯ ಎಂ.ಎ ಕನ್ನಡದಲ್ಲಿ 11 ಪದಕ ಹಾಗೂ 5 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ.