ಸರಗೂರು: ತಾಲ್ಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದ ಸೆರೆ ಕಾರ್ಯಾಚರಣೆಯಲ್ಲಿ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಹಿಡಿದರು.
ಬಂಡೀಪುರ ಅರಣ್ಯ ವ್ಯಾಪ್ತಿಯ ಯಡಿಯಾಲ ವಲಯದಲ್ಲಿ ಸಾಕಾನೆಗಳ ಸಹಾಯದಿಂದ ಅರವಳಿಕೆ ಮದ್ದು ನೀಡಿ ವ್ಯಾಘ್ರವನ್ನು ಸೆರೆಹಿಡಿಯಲಾಯಿತು. ಈ ಹುಲಿ ಕಳೆದ ಮೂರು ದಿನಗಳ ಹಿಂದೆ ರೈತನ ಮೇಲೆ ದಾಳಿ ಮಾಡಿತ್ತು.
ನಿನ್ನೆಯಿಂದ ಅರಣ್ಯ ಇಲಾಖೆ ತಂಡವು ನಿರಂತರವಾಗಿ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದು, ಇಂದು ಯಶಸ್ಸು ಕಂಡಿದೆ. ಹುಲಿ ಸೆರೆಯಾಗುತ್ತಿದ್ದಂತೆಯೇ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.





