Mysore
25
haze

Social Media

ಗುರುವಾರ, 01 ಜನವರಿ 2026
Light
Dark

ಮೈಸೂರು | ಇಂದಿನಿಂದ ಚಿತ್ರಕಲೆ ಪ್ರದರ್ಶನ

ganjeefa raghupati bhat

ಮೈಸೂರು : ಇಂದಿನಿಂದ ಜು. 26 ರವರೆಗೆ ಅರಮನೆ ಚಿತ್ರಕಲಾವಿದ ಎಸ್.ಆರ್.ಅಯ್ಯಂಗಾರ್ ರಚಿಸಿರುವ ಚಿತ್ರಕಲೆಗಳನ್ನು ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಖ್ಯಾತ ಗಂಜೀಫಾ ಚಿತ್ರಕಲಾವಿದ ಗಂಜೀಫಾ ರಘುಪತಿ ಭಟ್ ಚಿತ್ರಕಲೆ ವೀಕ್ಷಿಸಿ ಬಳಿಕ ಚಾಲನೆ ನೀಡಿದರು. ಪ್ರದರ್ಶನದಲ್ಲಿ ಮೈಸೂರು ಅರಮನೆ ಆವರಣ, ನೈಸರ್ಗಿಕ ಚಿತ್ರಣ, ಶಿಲ್ಪಕಲೆಗಳಂತ ವಿಶಿಷ್ಟ ರೀತಿಯ ಹತ್ತು-ಹಲವು ಪ್ರಾಚೀನ ಚಿತ್ರಕಲೆಗಳನ್ನು ವೀಕ್ಷಿಸಿದರು.

ಬಳಿಕ ಮಾತನಾಡಿದ ಅವರು, ಕರ್ನಾಟಕದ ಚಿತ್ರಕಲೆ ಅತ್ಯಂತ ಹಿರಿಮೆ ಹಾಗೂ ವೈಶಿಷ್ಠತೆಯನ್ನು ಒಳಗೊಂಡಿದೆ. ಶ್ರೀಮಂತವಾದ ವಿಜಯನಗರ ಸಾಮ್ರಾಜ್ಯ ಪತನವಾದ ನಂತರದಲ್ಲಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ ಅನೇಕ ಕಲಾವಿದರು, ಅಂದಿನ ಕಾಲದಲ್ಲಿ ಚಿತ್ರ ಮಾಂತ್ರಿಕ ರವಿವರ್ಮನ ಪ್ರಭಾವಕ್ಕೊಳಗಾಗಿ ಚಿತ್ರಿಸಿರುವ ಚಿತ್ರಕಲೆಗಳು ಇಂದಿಗೂ ಹೆಚ್ಚು ಆಕರ್ಷಣಿಯವಾಗಿದ್ದು, ಎಲ್ಲರ ಗಮನ ಸೆಳೆಯುವಂತಿವೆ. ಅಂತಹ ಅತ್ಯಧ್ಬುತವಾದ ಚಿತ್ರಗಳಲ್ಲಿ ಮೈಸೂರು ಅರಮನೆಯ ಚಿತ್ರಕಲಾವಿದರಾಗಿದ್ದ ಎಸ್.ಆರ್.ಅಯ್ಯಂಗಾರ್ ಅವರು ರಚಿಸಿರುವ ಚಿತ್ರಗಳು ಬಹುಮುಖ್ಯವಾಗಿವೆ. ಅವರ ಚಿತ್ರಕಲೆಗಳನ್ನು ವೀಕ್ಷಿಸುತಿದ್ದರೆ, ಅವುಗಳಲ್ಲಿ ಸತ್ಯ-ಸತ್ವವೆಂಬುದನ್ನು ಒಳಗೊಂಡಿದೆ ಎಂದು ಅಭಿಪ್ರಾಯಿಸಿದರು.

ಮೈಸೂರಿನಲ್ಲಿ ಚಿತ್ರಕಲೆ ಉಳಿವು, ಮಹತ್ವ ದೊರೆತಿರುವುದಕ್ಕೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಿತ್ರಕಲೆಗೆ ಕೊಟ್ಟಂತಹ ಕೊಡುಗೆ ಮತ್ತು ಪ್ರಾಮುಖ್ಯತೆಯೇ ಕಾರಣ. ಇತ್ತೀಚೆಗೆ ಕೃತಕ ಬುದ್ದಿಮತ್ತೆ(ಎಐ) ತಂತ್ರಜ್ಞಾನ ಯುಗದಲ್ಲಿ ಚಿತ್ರಕಲೆ ಮೇಲಿನ ಆಸಕ್ತಿ ಕಡಿಮೆಯಾಗುತ್ತಿದ್ದು, ಎಲ್ಲವು ಕೃತಕವಾಗಿ ಸೃಷ್ಟಿಗೊಳ್ಳುತ್ತಿದೆ ಎಂದು ಆತಂಕಿಸಿದರು.

ಪ್ರಸ್ತುತದಲ್ಲಿ ಚಿತ್ರಕಲೆಯನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರಕಲೆಯ ಪ್ರೋತ್ಸಾಹಕ್ಕೆ ಪೂರಕವಾದ, ತರಬೇತಿ, ಕಾರ್ಯಚಟುವಟಿಕೆಗಳನ್ನು ರೂಪಿಸಿ ಹೆಚ್ಚಿನ ಒತ್ತು ನೀಡಬೇಕು. ಮುಖ್ಯವಾಗಿ ಸ್ಥಳೀಯತೆಯ ಉಳಿವಿಗಾಗಿ ದೇಶೀಯ ಚಿತ್ರಕಲೆಯನ್ನು ಉಳಿಸುವ ಕೆಲಸವಾಗಬೇಕಿದೆ. ಇದಲ್ಲದೇ ಚಿತ್ರಕಲೆ ಪ್ರೋತ್ಸಾಹಕ್ಕಾಗಿ ಇದೇ ಸ್ಥಳದಲ್ಲಿ ಶಾಶ್ವತವಾದ ಚಿತ್ರಕಲಾ ಗ್ಯಾಲರಿಯನ್ನು ಸ್ಥಾಪಿಸಬೇಕು ಎಂದು ಬೇಡಿಕೆಯನ್ನು ವ್ಯಕ್ತಪಡಿಸಿದರು.

ಅರಮನೆ ಕಲಾವಿದರಾದ ದಿ.ಎಸ್.ಆರ್.ಅಯ್ಯಂಗಾರ್ ಮೊಮ್ಮಗ ಅವಿನಾಶ್ ಪಾಠಕ್, ಆರ್ಕಿಟೆಕ್ಚರ್ ಬಿ.ಎಲ್.ಮಂಜುನಾಥ್, ಒಡೆಯರ್ ಸೆಂಟರ್ ಫಾರ್ ಆರ್ಕಿಟೆಕ್ಚರ್‌ನ ಸಹಾಯಕ ಪ್ರಾಧ್ಯಾಪಕ ಮದ್ವೇಶ್ ಪಾಂಡುರಂಗಿ ಇತರರಿದ್ದರು

Tags:
error: Content is protected !!