ಮೈಸೂರು: ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಮೆಡಿಕಲ್ ಶಾಪ್ ಮಾಲೀಕನನ್ನು ಅಡ್ಡಗಟ್ಟಿ ಚಿನ್ನದ ಸರ ಮತ್ತು ಹಣ ದೋಚಿರುವ ಘಟನೆ ನಡೆದಿದೆ.
ಇಲ್ಲಿನ ವಿಜಯನಗರದ ೪ನೇ ಹಂತದ ಬಸವನಪುರದಲ್ಲಿ ಈ ನಡೆದಿದೆ. ಮೆಡಿಕಲ್ ಶಾಪ್ ಮಾಲೀಕ ಸೋಮಶೇಖರ್ ಹಣ, ಚಿನ್ನದ ಸರ ಕಳೆದುಕೊಂಡವರು. ಎಂದಿನಂತೆ ರಾತ್ರಿ ಕೆಲಸ ಮುಗಿಸಿ ಮೆಡಿಕಲ್ ಶಾಪ್‌ನ ಬಾಗಿಲು ಮುಚ್ಚಿ ಮನೆಗೆ ತೆರಳುವ ವೇಳೆ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದ ಖದೀಮರು ಸೋಮಶೇಖರ್‌ಗೆ ಚಾಕು ತೋರಿಸಿ ಚಿನ್ನದ ಸರ ಮತ್ತು ನಗದನ್ನು ಕಿತ್ತುಕೊಂಡಿದ್ದಾರೆ.
ಯುವಕರು ಮುಖಕ್ಕೆ ಮಂಕಿ ಕ್ಯಾಪ್ ಧರಿಸಿದ್ದರಿಂದ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.