Mysore
20
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಮೈಸೂರು| 32 ದಿನಗಳಲ್ಲಿ 15 ಹುಲಿಗಳ ಸೆರೆ: ಡಿಸಿಎಫ್‌ ಪರಮೇಶ್ವರ್‌ ಮಾಹಿತಿ 

ಮೈಸೂರು: ಕಳೆದ 32 ದಿನಗಳಲ್ಲಿ 7 ದೊಡ್ಡ ಹುಲಿಗಳು ಹಾಗೂ 8 ಮರಿಹುಲಿಗಳನ್ನು ಸೆರೆಹಿಡಿಯಲಾಗಿದೆ ಎಂದು ಡಿಸಿಎಫ್‌ ಪರಮೇಶ್ವರ್‌ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಮೇಶ್ವರ್‌ ಅವರು, ಅಕ್ಟೋಬರ್.‌16ರಂದು ಬಡಗಲಪುರದ ರೈತನ ಮೇಲೆ ನಡೆದ ಹುಲಿ ದಾಳಿಯಿಂದ ಶುರುವಾದ ಬೇಟೆ ಅಲ್ಲಿಂದ ಇಲ್ಲಿಯವರೆಗೆ 3 ಜನ ರೈತರನ್ನು ಬಲಿ ಪಡೆದಿದೆ.

ದಾಳಿ ನಡೆಸಿದ ಹುಲಿ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಇರುವ ಸುಮಾರು 7 ದೊಡ್ಡ ಹುಲಿ ಹಾಗೂ 8 ಮರಿ ಹುಲಿಗಳು ಸೇರಿದಂತೆ ಒಟ್ಟು15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

ಮುಳ್ಳೂರು ರೈತನ ಮೇಲೆ ದಾಳಿ ಮಾಡಿದ ಹೆಣ್ಣು ಹುಲಿ ಹಾಗೂ ಮೂರು ಮರಿಗಳನ್ನು ಸೆರೆಹಿಡಿಯಲಾಗಿದ್ದು, ಅವುಗಳೆಲ್ಲಾ ಆರೋಗ್ಯವಾಗಿದೆ ಎಂದು ಹೇಳಿದರು.

Tags:
error: Content is protected !!