Mysore
28
moderate rain

Social Media

ಬುಧವಾರ, 25 ಜೂನ್ 2025
Light
Dark

ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ,ಮಗಳ ಶವ ಪತ್ತೆ ; ವರದಕ್ಷಿಣೆ ಕಿರುಕುಳ ಆರೋಪ

ಮೈಸೂರು : ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ, ಮಗಳ ಶವ ಪತ್ತೆಯಾಗಿರುವ ಘಟನೆ ಜಿಲ್ಲೆ ನಂಜನಗೂಡು ತಾಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ.

ಮಹದೇವಮ್ಮ (38) ಸುಪ್ರಿಯಾ (20) ಮೃತ ಅಮ್ಮ ಮಗಳಾಗಿದ್ದಾರೆ. ಗಂಡನ ವರದಕ್ಷಿಣೆ ಕಿರುಕುಳ ಹಿನ್ನಲೆ ನೇಣು ಬಿಗಿದುಕೊಂಡು ಸಾವನ್ನಪಿರುವುದಾಗಿ ಆರೋಪಿಸಲಾಗಿದೆ.

ಘಟನೆ ವಿವರ ; 22 ವರ್ಷಗಳ ಹಿಂದೆ ಜಯರಾಮು ಮೃತ ಮಹದೇವಮ್ಮ ವಿವಾಹವಾಗಿದ್ದರು. ಆರೋಪಿ ಜಯರಾಮು ಪದೇ ಪದೇ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದ. ಕಿರುಕುಳಕ್ಕೆ ಬೇಸತ್ತು ಮೃತ ಮಹದೇವಮ್ಮ ಹುಲ್ಲಹಳ್ಳಿ ಪೊಲೀಸ್ ಠಾಣೆ ಅನೇಕ ಬಾರಿ ದೂರು ನೀಡಿದ್ದರು. ಇಂದು ಮನೆಯ ತಂಬಾಕು ಬ್ಯಾರೆನ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಮ್ಮ ಮಗಳ ಶವ ಪತ್ತೆಯಾಗಿದೆ. ಮಹದೇವಮ್ಮ ಪತಿ ಜಯರಾಮು ಕೊಲೆ ಮಾಡಿದ್ದಾನೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:
error: Content is protected !!