ಮೈಸೂರು : ಜಿಲ್ಲೆಯ ನಂಜನಗೂಡಿನ ಪ್ರೇಮಿಗಳಾದ ಎಂ. ಸಂತೋಷ್ ಹಾಗೂ ಸಿ. ರಂಜಿತಾ ಅವರ ವಿವಾಹವು ಮಂತ್ರ ಮಾಂಗಲ್ಯದ (Mantra Mangalya) ಮೂಲಕ ಸರಳವಾಗಿ ನಡೆಯಿತು.
ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಎಂ. ಸಂತೋಷ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಸಿ.ರಂಜಿತಾ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದಾರೆ.
ಈ ಜೋಡಿಗಳು ಅಂತರ ಜಾತಿಯಾಗಿದ್ದರೂ ಎರಡು ಕುಟುಂಬದ ಒಪ್ಪಿಗೆ ಪಡೆದು ಮಂತ್ರ ಮಾಂಗಲ್ಯ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿವೆ. ಇದು ಮಾದರಿ ಎಂಬಂತೆ ನಡೆದಿರುವುದು ವಿಶೇಷ..
ಮಾನವ ಬಂಧುತ್ವ ವೇದಿಕೆಯ ಮುಖ್ಯಸ್ಥ ಉಗ್ರ ನರಸಿಂಹೆಗೌಡ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆ ಬೋಧಿಸಿದರು. ಇದೇ ಸಂದರ್ಭದಲ್ಲಿ ಅನೇಕ ಪ್ರಗತಿಪರ ಚಿಂತಕರು ಮದುವೆಯಲ್ಲಿ ಭಾಗಿಯಾಗಿದ್ದರು.





