Mysore
27
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಚಂದ್ರಗ್ರಹಣ : ನಾಳೆ ಸಂಜೆ 6 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ

ಮೈಸೂರು : ಶನಿವಾರ ಚಂದ್ರ ಗ್ರಹಣವಿರುವ ಹಿನ್ನೆಲೆ, ಮೈಸೂರಿನ ಚಾಮುಂಡಿ ಬೆಟ್ಟದ ದೇವಸ್ಥಾನ ಅವಧಿಗೂ ಮುಂಚಿತವಾಗಿ ಬಂದ್ ಆಗಲಿದ್ದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ನಾಳೆ ಸಂಜೆ‌ 6 ಗಂಟೆಗೆ ತಾಯಿ ಚಾಮುಂಡೇಶ್ವರಿ ದೇವಸ್ಥಾನ ಬಂದ್ ಆಗಲಿದೆ.ನಾಳೆ ಸಂಜೆ‌ 5 ಗಂಟೆಗೆ ಚಾಮುಂಡಿ ತೆಪ್ಪೊತ್ಸವ ನಡೆಯಲಿದ್ದು, 6 ಗಂಟೆಗೆ ಉತ್ಸವ ಮೂರ್ತಿ ದೇವಸ್ಥಾನಕ್ಕೆ ವಾಪಸ್ ಆಗಲಿದೆ. ಮೂರ್ತಿ ದೇವಸ್ಥಾನಕ್ಕೆ ಬರುತ್ತಿದ್ದಂತೆ ದೇವಸ್ಥಾನ ಬಂದ್ ಆಗಲಿದೆ.

ಗ್ರಹಣ ಕಾಲದಲ್ಲಿ ದೇವಾಲಯದಲ್ಲಿ ಪೂಜಾ ಕಾರ್ಯ ಜರುಗಲಿದ್ದು, ನಂತರ ಭಾನುವಾರ ಬೆಳಿಗ್ಗೆ 7.30ಕ್ಕೆ ಜನರಿಗೆ ದರ್ಶನಕ್ಕೆ ದೇವಸ್ಥಾನ ತೆರೆಯಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!