ಬೆಟ್ಟದಪುರ : ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲ್ ಗ್ರಾಮದ ಸರ್ಕಾರಿ ಮಂಟಿ ಗುಡ್ಡದ ಮೇಲೆ ಕಲ್ಲು ಬಂಡೆಯೊಳಗೆ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.
ಸಾರ್ವಜನಿಕರು ನೀಡಿದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪಿರಿಯಾಪಟ್ಟಣ ವಲಯ ಅರಣ್ಯ ಅಧಿಕಾರಿ ಪದ್ಮಶ್ರೀ, ಕೊಪ್ಪ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ಮುಜಾಮಿಲ್, ಮುಬಾರಕ್, ಗಸ್ತು ಅರಣ್ಯಪಾಲಕ ಸುನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಕಳೇಬರವನ್ನು ವಶಪಡಿಸಿಕೊಂಡರು.
ಮುಮ್ಮಡಿ ಕಾವಲು ಮೀಸಲು ಅರಣ್ಯ ಪ್ರದೇಶದಲ್ಲಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಎಸಿಎಫ್ ಮಹದೇವಯ್ಯ ಸಮ್ಮುಖದಲ್ಲಿ ಪಶುವೈದ್ಯ ಡಾ.ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದರು.





