ಹುಣಸೂರು : ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಗರದ ಹೆದ್ದಾರಿಯ ಬೈಪಾಸ್‌ನಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲ್ಲೂಕಿನ ಮಂಟಿ ಬಿಳುಗಲಿ ಗ್ರಾಮದ ಗಣೇಶ್ ಪುತ್ರ ದರ್ಶನ್ (೨೧) ಮೃತಪಟ್ಟವರು.
ಇವರಿಗೆ ತಂದೆ, ತಾಯಿ, ಸಹೋದರಿ ಇದ್ದಾರೆ. ಹುಣಸೂರು ಬೈಪಾಸ್ ರಸ್ತೆಯ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ತಜ್ಞರಾಗಿದ್ದ ದರ್ಶನ್ ಎಂದಿನಂತೆ ರಾತ್ರಿ ೧೧ರ ವೇಳೆಯಲ್ಲಿ ಕರ್ತವ್ಯ ಮುಗಿಸಿ ಆಸ್ಪತ್ರೆಯಿಂದ ತಮ್ಮ ಬೈಕಿನಲ್ಲಿ ನಗರದ ಕಡೆಗೆ ತೆರಳಲು ಹೆದ್ದಾರಿಗೆ ಬರುತ್ತಿದ್ದ ವೇಳೆ ಮೈಸೂರು ಕಡೆಯಿಂದ ಕೇರಳಕ್ಕೆ ತೆರಳುತ್ತಿದ್ದ ಕೇರಳ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬೈಕ್ ಬಸ್‌ನ ಮುಂಭಾಗ ಜಖಂಗೊಂಡಿದೆ.





