Mysore
28
light rain

Social Media

ಗುರುವಾರ, 06 ಆಗಸ್ಟ್ 2026
Light
Dark

ಕಬಿನಿ ಹೊಳೆಯಲ್ಲಿ ಈಜಲು ಹೋಗಿ ಅರಣ್ಯ ರಕ್ಷಕ ಸಾವು

ಎಚ್‌.ಡಿ.ಕೋಟೆ : ಕಬಿನಿ ಹೊಳೆಯಲ್ಲಿ ಈಜಲು ಹೋಗಿ ಓರ್ವ ಅರಣ್ಯ ರಕ್ಷಕ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ನಾಗರಹೊಳೆಯ ಅಂತರಸಂತೆ ವಲಯಲ್ಲಿ ಅರಣ್ಯ ರಕ್ಷಕನಾಗಿ ಸೇವೆಯಲ್ಲಿದ್ದ ಎಚ್.ಡಿ.ಕೋಟೆ ತಾಲೂಕಿನ ಅಂಕನಾಥಪುರ ಗ್ರಾಮದ ಸುಪ್ರೀತ್ ಸಾವನ್ನಪ್ಪಿದವರು.

ಮೃತ ಸುಪ್ರೀತ್‌ ಮಂಗಳವಾರ ರಾತ್ರಿ ಕರ್ತವ್ಯ ಮುಗಿಸಿ ಬುಧವಾರ ಬೆಳಗ್ಗೆ ಕಬಿನಿ ಹೊಳೆಯಲ್ಲಿ ಈಜಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಸದ್ಯ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಮೃತದೇಹ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಅಪ್‌ಡೇಟ್‌ ಆಗಲಿದೆ.

Tags:
error: Content is protected !!