ಮೈಸೂರು : ಜಾ.ದಳ 2018 ರಲ್ಲಿ ಕೇವಲ 18 ಸೀಟುಗಳನ್ನು ಗೆದ್ದಿತು. ಇದರ ಸಂಖ್ಯೆ ಪ್ರತಿಬಾರಿ ಕಡಿಮೆಯಾಗುತ್ತಿದೆ. ನಾನು ಜಾ.ದಳದ ರಾಜ್ಯಾಧ್ಯಕ್ಷನಾಗಿದ್ದಾಗ 59 ಸೀಟುಗಳನ್ನು ಗೆದ್ದೆವು. ಈಗ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಸೇರಿಕೊಂಡು 18 ಸ್ಥಾನಗಳನ್ನು ಗೆದ್ದಿದ್ದಾರೆ. ಅದೊಂದು ವೀಕ್ ಪಾರ್ಟಿ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.
ಮಹರಾಜ ಕಾಲೇಜಿನ ಮೈದಾನದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
2008 ಮತ್ತು 2018ರಲ್ಲಿ ಅಧೊಕಾರಕ್ಕೆ ಬಂದಾಗ ಏನು ಮಾಡಲಿಲ್ಲ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಬರಲಿಲ್ಲ. 2008ರಲ್ಲಿ 110, 2018ರಲ್ಲಿ 111ಸೀಟುಗಳನ್ನು ಪಡೆದುಕೊಂಡಿತು. ಜಾ.ದಳ 2018ರಲ್ಲಿ ಕೇವಲ 18ಸೀಟುಗಳನ್ನು ಗೆದ್ದಿತು. ಜಾ.ದಳ ಪ್ರತಿಬಾರಿ ಕಡಿಮೆಯಾಗುತ್ತಿದೆ ಎಂದು ಟೀಕಿಸಿದರು.
ಇದೊಂದು ಶಕ್ತಿ ಪ್ರದರ್ಶನವಲ್ಲ. ಬಿಜೆಪಿ,ಜಾ.ದಳದವರು ಹೇಳುವ ಶಕ್ತಿ ಪ್ರದರ್ಶನವಲ್ಲ. ಅಭಿವೃದ್ದಿ ಶಕ್ತಿಯನ್ನು ಮುಂದಿಡುವ ಸಮಾವೇಶವಾಗಿದೆ. ಮತ್ಸರ ಇರಬೇಕು. ಆದರೆ, ಬಿಜೆಪಿ,ಜಾ.ದಳದ ನಾಯಕರಿಗೆ ಇಷ್ಟೊಂದು ಮತ್ಸರ ಇರಬಾರದು. ಸಹಿಸಿಕೊಳ್ಳಲಾಗದು. ಸುಳ್ಳುಹೇಳಿಕೊಂಡು ಜನರಿಗೆ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೈಸೂರು ನಗರಕ್ಕೆ ಬಿಜೆಪಿ, ಜಾ.ದಳದವರ ಕೊಡುಗೆ ಏನಿಲ್ಲ. ನಾನು ಜಾ.ದಳದ ರಾಜ್ಯಾಧ್ಯಕ್ಷನಾಗಿದ್ದಾಗ 59 ಸೀಟುಗಳನ್ನು ಗೆದ್ದೆವು. ಈಗ ಎಚ್.ಡಿ.ದೇವೇಗೌಡ,ಎಚ್.ಡಿ.ಕುಮಾರಸ್ವಾಮಿ ಸೇರಿಕೊಂಡು 18 ಸ್ಥಾನಗಳನ್ನು ಗೆದ್ದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮತ್ತೆ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲ್ಲ. ಜಾ.ದಳದಲ್ಲಿ ಇರುವ ಶಾಸಕರು, ಕಾರ್ಯಕರ್ತರು ನಿಮ್ಮನ್ನು ಕೈ ಬಿಡುತ್ತಿರುವ ಕಾರಣ ಬಿಜೆಪಿಯೊಂದಿಗೆ ಸೇರಿಕೊಂಡಿದ್ದಾರೆ. ಜನರ ಪ್ರೀತಿ,ವಿಶ್ವಾಸ ಉಳಿಸಿಕೊಂಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.





