Mysore
28
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ತಪ್ಪು ಮಾಡಿರುವುದು ಸಾಭೀತಾದರೇ, ತಪ್ಪು ಯಾರೇ ಮಾಡಿದ್ದರು ಶಿಕ್ಷೆ ಆಗಲೇಬೇಕು : ಸಾ.ರಾ.ಮಹೇಶ್‌ !

ಹುಬ್ಬಳ್ಳಿ : ಯಾರೇ ಮಾಡಿದ್ದರು ಇದು ಕ್ಷಮಿಸಲಾರದ ಅಪರಾದ ಎಂದು ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಪ್ರತಿಕ್ರಿಯೆ ನೀಡಿದರು.

ಹುಬ್ಬಳ್ಳಿಯಲ್ಲಿ ಇಂದು ನಡೆಯಲಿರುವ ಕೋರ್‌ಕಮಿಟಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಲೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವ್ಯಕ್ತಿಯಾಗಲಿ ತಪ್ಪು ಮಾಡಿದರೆ ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಸರ್ಕಾರ ಎಸ್‌ಐಟಿ ರಚನೆಯಾಗಿದೆ ತನಿಖೆ ಮಾಡಿ ತಪ್ಪಿತಸ್ತರಿಗೆ ಶಿಕ್ಷೆ ನೀಡಲಿ. ಆದರೆ ಈ ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವವರ ವಿರುದ್ಧ ಹಾಗೂ ಈ ವೀಡಿಯೋ ಇರುವ ಪೆಂಡ್ರೈವ್‌ ಹಂಚಿ ಹೆಣ್ಣುಮಕ್ಕಳಿಗೆ ಅವಮಾನ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.

ಇದು ಕ್ಷಮಿಸಲಾರದ ಅಪರಾಧ. ಇದರ ಬಗ್ಗೆ ಮಾತನಾಡುವುದು ಅಸಹ್ಯ. ಆದರೇ ಅದು ಸಾಭೀತು ಆಗಬೇಕು. ತಪ್ಪು ಮಾಡಿದವರು ಹಾಗೂ ಅದನ್ನು ಹಂಚುವ ಮೂಲಕ ಹೆಣ್ಣುಮಕ್ಕಳನ್ನು ಬೀದಿಗೆ ತಂದವರ ವಿರುದ್ಧವೂ ಕ್ರಮವಾಗುವ ಕುರಿತಂತೆ ಎಲ್ಲಾ ವಿಚಾರಗಳ ಬಗ್ಗೆ ಇಂದು ಕರೆದಿರುವ ಕೋರ್‌ಕಮಿಟಿ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.

Tags: