Mysore
25
overcast clouds

Social Media

ಶನಿವಾರ, 22 ಆಗಸ್ಟ್ 2026
Light
Dark

ಪ್ಲಾಸ್ಟಿಕ್ ತ್ಯಾಜ್ಯದಿಂದ  ಹೆಬ್ಬಾಳು ಕೆರೆ ಮಲೀನ

ಮೈಸೂರು: ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಹೆಬ್ಬಾಳು ಕೆರೆ ಮಲೀನವಾಗುತ್ತಿದೆ. ರಾಜಕಾಲುವೆಗಳಿಂದ ಬಂದಂತಹ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದುಈ ವಿಷಯವಾಗಿ ದೂರುನೀಡಿದರೆ  ನಗರ ಸಭೆ  ಹಾಗೂ ಮೈಸೂರು ಮಹಾ ನಗರ ಪಾಲಿಕೆಯ ಅಧಿಕಾರಿಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಜಾರಿಕೊಳ್ಳುತ್ತಿದ್ದಾರೆ.

ಈ ಹೆಬ್ಬಾಳು ಕೆರೆ ಉಳಿಸಿ ಹೋರಾಟ ಸಮಿತಿ ಕೆರೆಯನ್ನು ಉಳಿಸುವಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡರ ನೇತೃತ್ವದಲ್ಲಿ ಯಶಸ್ಸು ಕಂಡಿತು ನಂತರ ಇದರ ಅಭಿವೃದ್ಧಿಗೆ ಕೈ ಹಾಕಿದವರು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಯವರು ಸರಿ ಸುಮಾರು ಮೂವತ್ತು ಕೋಟಿ ರೂಗಳಲ್ಲಿ ಕೆರೆಯ ಅಭಿವೃದ್ಧಿ ಕಾರ್ಯವೂ ಸಾಂಗವಾಗಿ ಸಾಗಿತು ಆದರೂ ಇದರ ನಿರ್ವಹಣೆಯನ್ನು ಇನ್ಫೋಸಿಸ್ ಸಂಸ್ಥೆ ಮಾಡುತ್ತಿದೆ. ಉದ್ಯಾನವನ ನಿರ್ವಹಣೆ ಆಗುತ್ತಿದೆ ಆದರೆ ಕೆರೆಯ ತ್ಯಾಜ್ಯವನ್ನು ತೆರವುಗೊಳಿಸಲು ಅಸಮರ್ಥವಾಗಿರುವ ಅಧಿಕಾರಿವರ್ಗ ಮತ್ತು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!