Mysore
15
few clouds

Social Media

ಗುರುವಾರ, 22 ಜನವರಿ 2026
Light
Dark

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳ ಪರದಾಟ

ಎಚ್.ಡಿ.ಕೋಟೆ: ಬಸ್‌ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ತಾಲ್ಲೂಕಿನ ಅಂತರಸಂತೆಯಿಂದ ನೂರಲಕುಪ್ಪೆ, ಚಿಲ್ಲರೆ ಮರದ ತಿಟ್ಟು, ಮಚ್ಚರೆ, ರಾಮೇನಹಳ್ಳಿ, ಆನಗಟ್ಟಿ ಗ್ರಾಮಗಳಿಗೆ ತೆರಳಲು ವಿದ್ಯಾರ್ಥಿಗಳು ಪರಿಪಾಟಲು ಅನುಭವಿಸುತ್ತಿದ್ದು, ಬಸ್‌ ವ್ಯವಸ್ಥೆ ಇಲ್ಲದೇ ತೀವ್ರ ಪರದಾಟ ನಡೆಸುತ್ತಿದ್ದಾರೆ. ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಶಾಲಾ ವಿದ್ಯಾರ್ಥಿಗಳ ಗೋಳನ್ನು ಹೇಳೊರಿಲ್ಲ ಕೇಳೊರಿಲ್ಲ ಎನ್ನುವಂತಾಗಿದೆ.

ಸಂಜೆ 4-30ಕ್ಕೆ ಶಾಲೆ ಬಿಟ್ಟರೆ ಮನೆಗೆ ತೆರಳಲು ಗಂಟೆಗಟ್ಟಲೆ ಬಸ್‌ಗೆ ಕಾದು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಕಿಲೋ ಮೀಟರ್ ಗಟ್ಟಲೆ ನಡೆದು ಊರು ಸೇರೋಣ ಎಂದರೆ ಕಾಡು ಪ್ರಾಣಿಗಳ ಕಾಟ ಕೂಡ ಜಾಸ್ತಿಯಾಗಿದ್ದು, ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿಗಳು, ನಾವು ಶಾಲೆಗೆ ಹೋಗಲು ಸರಿಯಾದ ಬಸ್‌ ಸೌಕರ್ಯ ಇಲ್ಲದ ಪರಿಣಾಮ ಬೈಕ್‌ ಹಾಗೂ ಆಟೋಗಳಲ್ಲಿ ಹೋಗುತ್ತಿದ್ದೇವೆ. ಆಟೋಗಳು ಕೂಡ ಸರಿಯಾದ ಸಮಯಕ್ಕೆ ಬರಲ್ಲ. ಓದಲೂ ಆಸಕ್ತಿ ಇದ್ದರೂ ಬಸ್ ತೊಂದರೆಯಿಂದ ಶಾಲೆಯೇ ಬೇಡ ಅನ್ನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Tags:
error: Content is protected !!