ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿಯೂ ಸಿದ್ಧತೆಗಳು ನಡೆಯುತ್ತಿದ್ದು, ಇಂದು ಗಜಪಡೆಗೆ ಫಿರಂಗಿ ಮೂಲಕ ಸಿಡಿಮದ್ದು ಸಿಡಿಸುವ ತಾಲೀಮು ನಡೆಯಿತು.
ವಸ್ತುಪ್ರದರ್ಶನ ಮೈದಾನದ ವಾಹನ ನಿಲುಗಡೆ ಜಾಗದಲ್ಲಿ ಇಂದು ತಾಲೀಮು ನಡೆಸಲಾಯಿತು. ಏಳು ಫಿರಂಗಿ ಗಾಡಿಗಳಿಂದ ಸಿಆರ್ ಸಿಬ್ಬಂದಿಗಳು ಕುಶಾಲತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21ಕುಶಾಲತೋಪು ಸಿಡಿಸಿ ತಾಲೀಮು ನಡೆಸಲಾಯಿತು.
ದಸರಾ ಜಂಬೂ ಸವಾರಿ ಮೆರವಣಿಗೆಗೂ ಮುನ್ನ ಈ ಫಿರಂಗಿ ಸಿಡಿಸುವ ಕಾರ್ಯಕ್ರಮ ನಡೆಯಲಿದ್ದು, ಆನೆಗಳು, ಕುದುರೆಗಳು ಬೆದರದೆ ಸುಗಮವಾಗಿ ಸಾಗಲಿ, ಅವುಗಳಿಗೆ ಸಿಡಿಮದ್ದಿನ ಶಬ್ದ ಅಭ್ಯಾಸವಾಗಲಿ ಎಂಬ ದೃಷ್ಟಿಯಿಂದ ತಾಲೀಮು ನಡೆಸಲಾಗುತ್ತದೆ.