Mysore
28
moderate rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಸಾಧ್ಯ: ರಾಜೇಗೌಡ

ಪಿರಿಯಾಪಟ್ಟಣ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರತಿನಿತ್ಯ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಯೋಗಾಭ್ಯಾಸ ಅಳವಡಿಸುಕೊಂಡಾಗ ಮಾತ್ರ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವೆಂದು ರೋಟರಿ ಅಧ್ಯಕ್ಷ ಎಂ ಎಂ ರಾಜೇಗೌಡ ಹೇಳಿದರು.

ಪಟ್ಟಣದ ರೋಟರಿ ಸಮುದಾಯದಲ್ಲಿ ಗುರುವಾರ(ಜು.೨೫) ನೆಡದ ರೋಟರಿ ಮಿಡ್ ಟೌನ್ ಮತ್ತು ಲಕ್ಷ್ಮಿ ಹೆಲ್ತ್ ಕೇರ್ ಸೆಂಟರ್ ಪಿರಿಯಾಪಟ್ಟಣ ಇವರ ಸಹಬಾಗಿತ್ವದಲ್ಲಿ ಉಚಿತ ಯೋಗ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಜನಸಾಮಾನ್ಯರಲ್ಲಿ ಸರಿಯಾದ ಆಹಾರ ಪದ್ದತಿಯನ್ನು ಅಳವಡಿಸಿ ಕೊಳ್ಳದೆ ಆರೋಗ್ಯದಲ್ಲಿ ಏರುಪೇರು ಕಾಣುತಿದ್ದು ಇದರ ಬಗ್ಗೆಯಲ್ಲಿ ಪ್ರತಿಯೊಬ್ಬರು ಜಾಗೂರಕರಾಗಬೇಕು ಹಾಗೂ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಲಕ್ಷ್ಮಿ ಹೆಲ್ತ್ ಕೇರ್ ರೊಡನೆ ಜೋತೆಗೂಡಿ ರೋಟರಿ ಸಂಸ್ಥೆಯು ಈ ಹಿಂದೆ ಹಲವಾರು ಆರೋಗ್ಯ ಕ್ಯಾಂಪ್ ಆಯೋಜನೆ ಮಾಡಿ ಜನರ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಸಮುದಾಯ ಮಟ್ಟದಲ್ಲಿ ಸಾಮಾಜಿಕವಾಗಿ 100 ಉಚಿತ ಆರೋಗ್ಯ ಶಿಬಿರವನ್ನು 25 ಅಂಗನವಾಡಿ ಕೇಂದ್ರಗಳಲ್ಲಿ 25 ಚೇರ್ ಗಳನ್ನು ಉಚಿತ ಕೊಡುಗೆಯಾಗಿ ನೀಡಿತಿದ್ದು,ರೋಟರಿ ಕ್ಲಬ್ ನ ಈ ಸಮಾಜಮುಖಿ ಕೆಲಸಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು  ಎಂದರು.

ಪ್ರಸಕ್ತ ವರ್ಷದ ಜು. 25 ರಿಂದ ಜೂ. 2025 ರವರೆಗೆ ಪ್ರತಿನಿತ್ಯ ನಿರಂತರ ಒಂದು ವರ್ಷಗಳ ತನಕ ಬೆಳಿಗ್ಗೆ 7 ರಿಂದ 8 ರವರೆಗೆ ಉಚಿತ ಯೋಗ ಶಿಬಿರ ವನ್ನು,ಬೆಳಿಗ್ಗೆ 8 ರಿಂದ 9 ರ ತನಕ ಉಚಿತ ಆರೋಗ್ಯ ತಪಾಸಣೆಯ ಶಿಬಿರವನ್ನು ನಮ್ಮ ಕ್ಲಬ್ ನಲ್ಲಿ ಉಚಿತವಾಗಿ ದೊರೆಯಲಿದ್ದು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು, ಶಿಬಿರಕ್ಕೆ 15000 ವೆಚ್ಚದ ಔಷಧಿಯನ್ನು ಕೊಡುಗೆ ಯಾಗಿ ನೀಡಿದ ಎಸ್ ಎಂ ಎಸ್ ರವಿಶಂಕರ್ ಅವರ ಕಾರ್ಯ ಶ್ಲಾಘನೀಯ ಎಂದರು.

ಲಕ್ಷ್ಮಿ ಹೆಲ್ತ್ ಕೇರ್ ನ ವೈದ್ಯರು ಹಾಗೂ ವಾಟರ್ ಸಾನಿಟೇಷನ್ ನಿರ್ದೇಶಕರಾದ ಡಾ. ಪ್ರಕಾಶ್ ಬಾಬು ರಾವ್ ಮಾತನಾಡಿ, ಜನರ ಆರೋಗ್ಯ ಸುಧಾರಿಸಲು ಈ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು ದಿನಂಪ್ರತಿ ಬ್ಯಾಚ್ ಟು ಬ್ಯಾಚ್ ಯೋಗ ತರಗತಿ ಏರ್ಪಡಿಸಲಾಗಿದೆ. ಆರೋಗ್ಯದ ದೃಷ್ಟಿಯಿಟ್ಟು ಪ್ರತಿಯೊಬ್ಬರಿಗೂ ನಮ್ಮ ಶಿಬಿರದಲ್ಲಿ ತಕ್ಕಮಟ್ಟಿಗೆ ಔಷಧ, ರಕ್ತ ಪರೀಕ್ಷೆ ಯನ್ನು ಉಚಿತವಾಗಿ ನೀಡಲಾಗುವುದು ಹಾಗೂ ದೊಡ್ಡ ಮಟ್ಟದ ಖಾಯಿಲೆ ಕಂಡುಬಂದರೆ ಮೈಸೂರಿನ ಪ್ರತಿಷ್ಠಿತ ಆರೋಗ್ಯ ಕೇಂದ್ರ ಗಳಲ್ಲಿ ನಮ್ಮ ವತಿಯಿಂದ ಕಡಿಮೆ ವೆಚ್ಚ ದಲ್ಲಿ ಸೇವೆಯನ್ನು ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ಹಿಂದೆ 2020-22 ರಲ್ಲೂ ತಾಲೂಕಿನಾದ್ಯಂತ 300 ಹೆಲ್ತ್ ಕ್ಯಾಂಪ್ ಮಾಡಿದ್ದೆವು, ಜನ ಸೇವೆಯೇ ಜನಾರ್ದನ ಸೇವೆಯಾಗಬೇಕು ಸಂಪಾದನೆ ಒಂದೇ ಜನರ ಗುರಿಯಾಗದೆ ಜೋತೆಗೆ ಸಮಾಜ ಸೇವೆ ಯನ್ನು ಸಹ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಸದಸ್ಯರಾದ ಹರೀಶ್ ಗೌಡ ಬಿ. ಎಸ್,ಡಾ. ವಿರೂಪಾಕ್ಷ, ಡಾ. ವಿನಯ್ ಶೇಖರ್,ಡಾ.ಆನಂದ್,ರಾಷ್ಟ್ರೀಯ ಯೋಗ ತರಬೇತಿದಾರರಾದ ಸ್ವಾಸ್ತಿ ರೈ,ಡಾ.ನಿಶಾ ಜೋಗಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags: