Mysore
16
broken clouds

Social Media

ಬುಧವಾರ, 21 ಜನವರಿ 2026
Light
Dark

ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಆಹಾರ ಸಚಿವ ಮುನಿಯಪ್ಪ

health minister sudden visit to rice storage building

ಮೈಸೂರು : ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಅವರು ಶನಿವಾರ ಮೈಸೂರಿನ ದಕ್ಷಿಣ ನಗರದ ಸಗಟು ಮಳಿಗೆ ಬಂಡಿಪಾಳ್ಯಕ್ಕೆ ಬೇಟಿ ನೀಡಿ ಆಹಾರ ಧಾನ್ಯಗಳ ಪರಿಶೀಲನೆ ನಡೆಸಿದರು.

ಅಕ್ಕಿ, ರಾಗಿಯ ಗುಣಮಟ್ಟದ ಕುರಿತು ಪರಿಶೀಲಿಸಿ ಉತ್ತಮವಾದ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು ಎಂದರು.

ಸಗಟು ಮಳಿಗೆಯನ್ನು ಪರಿಶೀಲಿಸಿ ಸಗಟು ಮಳಿಗೆಯು ಗುಣಮಟ್ಟದ್ದಾಗಿದ್ದು ಉತ್ತಮವಾಗಿದೆ ಎಂದು ಸಿಬ್ಬಂದಿಗೆ ಪ್ರಶಂಸಿಸಿ ರಾಜ್ಯದ ಎಲ್ಲಾ ಸಗಟು ಮಳಿಗೆಗಳು ಈ ರೀತಿಯಲ್ಲಿ ಗುಣಮಟ್ಟವನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸಗಟು ಮಳಿಗೆಯಲ್ಲಿ ಹಮಾಲಿ ಕೆಲಸಗಾರನ್ನು ಮಾತನಾಡಿಸಿ ಅವರ ಸಮಸ್ಯೆಗಳು ಏನೇ ಇದ್ದರು ಬಗೆಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್,ಜಂಟಿ ಉಪ ನಿರ್ದೇಶಕ ಮಂಟೇಸ್ವಾಮಿ,ಸಗಟು‌ಮಳಿಗೆಯ ಸಹಾಯ ನಿರ್ದೇಶಕ ಕಿರಣ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!