Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಸ್ಪೋಟ ದುರಂತ | ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಮಹದೇವಪ್ಪ ; ಬಳಿಕ ಹೇಳಿದ್ದೇನು?

ಮೈಸೂರು : ಮೈಸೂರಿನ ಅರಮನೆ ಬಳಿ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ದುರಂತ ಪ್ರಕರಣ ಸಂಬಂಧ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಕೆ.ಆರ್‌.ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಸಚಿವ ಮಹದೇವಪ್ಪ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗಾಯಳುಗಳಿಗೆ ಸರ್ಕಾರದಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇಬ್ಬರಿಗೆ ಸ್ಥಿತಿ ಕ್ರಿಟಿಕಲ್ ಇದೆ.
ಇದೊಂದು ಆಕಸ್ಮಿಕ ಘಟನೆ. ಯಾರು ಭಯ ಪಡುವ ಆತಂಕ ಇಲ್ಲ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ: ಸಿಲಿಂಡರ್‌ ಸ್ಫೋಟ : ಮೈಸೂರಿಗೆ NIA ತಂಡ ಭೇಟಿ, ಹಲವು ಆಯಾಮಗಳಿಂದ ಪರಿಶೀಲನೆ

ಘಟನೆಯಲ್ಲಿ ಓರ್ಮ ಮೃತ ಪಟ್ಟಿದ್ದಾನೆ, ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸರ್ಕಾರವೇ ಚಿಕಿತ್ಸಾ ವೆಚ್ಚ ಭರಸಿಲಿದೆ. ಮೃತ ಸಲೀಂ ಮೈಸೂರಿನಲ್ಲಿ ಹೊಟ್ಟೆ ಪಾಡಿಗಾಗಿ ಹಲವು ವ್ಯಾಪಾರ ಮಾಡುತ್ತಿದ್ದ. ಐಸ್ ಕ್ಯಾಂಡಿ ಮಾರುತ್ತಿದ್ದ ಜೊತೆಗೆ ಬಲೂನ್ ಮಾರುತ್ತಿದ್ದ. ಹಿಲೀಯಂನ್ನ ಪೌಡರ್ ಬಳಸಿ ತಯಾರಿಸಿಕೊಳ್ಳುತ್ತಿದ್ರು. ಈ ಬಗ್ಗೆ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದರು.

ಮಾಹಿತಿ ಪಡೆದ ಎನ್‌ಐಎ
ಘಟನೆ ಬಗ್ಗೆ ಎನ್ಐಎ ಘಟನೆಯ ಮಾಹಿತಿ ಪಡೆದುಕೊಂಡಿದೆ. ಇಂತಹ ಘಟನೆ ನಡೆದಾಗ ಎನ್ಐಎ ಮಾಹಿತಿ ಪಡೆಯುವುದು ಸಹಜ ಪ್ರಕ್ರಿಯೆ. ಅದರಂತೆ ಅವರು ತನಿಖೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಈಗಾಗಲೇ ಎನ್ಐಎ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅದೊಂದು ಆಕಸ್ಮಿಕ ಘಟನೆ. ಮೃತ ಸಲೀಂ ಹೊಟ್ಟೆ ಪಾಡಿಗಾಗಿ ವಿವಿಧ ಕೆಲಸಗಳನ್ನ ಮಾಡುತ್ತಿದ್ದ. ಯಾರು ಸಹ ಆತಂಕ‌ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

Tags:
error: Content is protected !!