ಮೈಸೂರು: ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ರೋಹಿತ್ ಪಾಂಡೆ ಎಂಬ ವಕೀಲ ಶೂ ಎಸೆದು ನಡೆಸಲು ಯತ್ನಿಸಿದ ದಾಳಿಯು ಪಾಕಿಸ್ತಾನಿ ಉಗ್ರರಿಗಿಂತಲೂ ಕ್ರೂರವಾಗಿದ್ದು, ಕೂಡಲೇ ಆತನನನ್ನು ಗಲ್ಲಿಗೇರಿಸಬೇಕೆಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಮುಖಂಡ ದೇವಗಳ್ಳಿ ಸೋಮಶೇಖರ್ ಒತ್ತಾಯಿಸಿದ್ದಾರೆ.
ಇದನ್ನು ಓದಿ : ಸುಪ್ರೀಂಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ವಕೀಲನ ಬಂಧನ
ಮಧ್ಯಪ್ರದೇಶದಲ್ಲಿ ವಿಷ್ಣುವಿನ ದೇವಸ್ಥಾನ ಮರು ನಿರ್ಮಾಣ ಮಾಡಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ನಡೆದಿದೆ ಎಂದರೆ ಸನಾತನ ಧರ್ಮವನ್ನು ಮೌಢ್ಯ ಬಂಡವಾಳ ಮಾಡಿಕೊಂಡಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಕೈವಾಡ ಈ ಪ್ರಕರಣದಲ್ಲಿದೆ. ದೇಶವನ್ನು ಅಭದ್ರತೆಯತ್ತ ಕೊಂಡೊಯ್ಯುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನ್ಯಾಯಮೂರ್ತಿಗಳು ಪ್ರಮಾಣ ವಚನ ಪಡೆದ ದಿನದಿಂದಲೂ ಸಂವಿಧಾನವನ್ನೂ ಬಲವಾಗಿ ಸಮರ್ಥಿಸಿಕೊಂಡು ಅಂಬೇಡ್ಕರ್‌ರವರ ಆಶಯಗಳನ್ನು ಮತ್ತು ಸಂವಿಧಾನದ ಮೂಲ ಆಶಯಗಳನ್ನು ಪ್ರತಿಪಾದಿಸುತ್ತಾ ಅವುಗಳನ್ನು ಗಟ್ಟಿಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕಗೊAಡ ಮನುವಾದಿಗಳು ಈ ರೀತಿಯ ದೇಶದ್ರೋಹ ಪ್ರಕರಣಗಳನ್ನು ನಡೆಸುತ್ತಿದ್ದು, ದೇಶದಲ್ಲಿನ ಪ್ರಜ್ಞಾವಂತರು, ಸುಧಾರಕರು, ಪ್ರಗತಿಪರರು, ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ರಕ್ಷöಣೆಗೆ ಮುಂದಾಗಬೇಕಿದೆ ಎಂದು ಹೇಳಿದ್ದಾರೆ.





