Mysore
27
haze

Social Media

ಸೋಮವಾರ, 23 ಫೆಬ್ರವರಿ 2026
Light
Dark

ಒಳಮೀಸಲಾತಿ ಜಾರಿ ವಿಳಂಬ : ಆ.1 ರಂದು ವಿವಿಧ ಸಂಘಟನೆಗಳ ಪ್ರತಿಭಟನೆ

Teacher Transfers Spark Student Protest; Classes Boycotted

ಮೈಸೂರು: ರಾಜ್ಯ ಸರ್ಕಾರ ನಡೆಸುತ್ತಿರುವ ಒಳ ಮೀಸಲಾತಿ ಜಾತಿ ಜನಗಣತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಶೀರ್ಘ ವರದಿ ಜಾರಿಗಾಗಿ ಒತ್ತಾಯಿಸಿ ವಿವಿಧ ಸಂಘಟನೆಗಳಿಂದ ನಾಳೆ(ಆ.1) ಪ್ರತಿಭಟನೆ ನಡೆಸಲಿವೆ.

ನಗರದ ವಿವಿಧೆಡೆಗಳಲ್ಲಿ ಮಾದಿಗ ಜನಾಂಗದ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರ ಈವರೆಗೂ ಒಳ ಮೀಸಲಾತಿ ಜಾರಿಗೊಳಿಸಿಲ್ಲ. ಕಳೆದ ಒಂದು ವರ್ಷದ ಹಿಂದೆ ಸಿದ್ದ ಪಡಿಸಿದ್ದ ನಿವೃತ್ತ ನ್ಯಾಯಾಧಿಶ ನಾಗಮೋಹನ್ ದಾಸ್ ವರದಿಯನ್ನು ಜಾರಿ ಮಾಡದೇ ಕಾಲಾಹರಣ ಮಾಡಿದೆ. ಮತ್ತೆ ಹೊಸ ಜಾತಿಗಣತಿ ನಡೆಸಲು ಮುಂದಾಗಿ 3 ತಿಂಗಳುಗಳು ಕಳೆದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದಾಗಿ ಮಾದಿಗ ಸಮುದಾಯ ದಿನೇ ದಿನೇ ಮೀಸಲಾತಿಯಿಂದ ವಂಚಿತವಾಗುತ್ತಿದೆ. ರಾಜ್ಯ ಸರ್ಕಾರ ಒಳ ಮೀಸಲಾತಿ ಜಾತಿ ಗಣತಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ವಿಚಾರವಾಗಿ ಮಾದಿಗ ಸಫಾಯಿ ಕರ್ಮಚಾರಿ ಒಕ್ಕೂಟ, ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟ, ಮಾದಿಗ ಸಂಟನೆಗಳ ಒಕ್ಕೂಟಗಳು ಪ್ರತಿಭಟನೆ ನಡೆಸಲಿದ್ದಾರೆ.

Tags:
error: Content is protected !!