ಹುಣಸೂರು: ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ಚಿಕ್ಕಹೆದ್ದೂರು ಗ್ರಾಮದಲ್ಲಿ ಜಮೀನಿಗೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 3 ರಿಂದ 4 ವರ್ಷದ ಗಂಡು ಜಿಂಕೆ ಮೃತಪಟ್ಟಿದೆ.
ಚಿಕ್ಕಹೆದ್ದೂರು ಗ್ರಾಮದಲ್ಲಿರುವ ಅರುಣ್ ಎಂಬುವವರ ತೋಟಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಅರಣ್ಯದಿಂದ ಮೇವು ಹುಡುಕಿ ತೋಟಕ್ಕೆ ಲಗ್ಗೆಯಿಟ್ಟ ಜಿಂಕೆಯೊಂದರ ಕೊಂಬು ಸಿಲುಕಿ ನಿತ್ರಾಣಗೊಂಡು ಸಾವನ್ನಪ್ಪಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ನವೀನ್ ಜಿಂಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.





