Mysore
22
broken clouds

Social Media

ಶುಕ್ರವಾರ, 27 ಫೆಬ್ರವರಿ 2026
Light
Dark

ವಿಶ್ರಾಂತಿಗೆಂದು ಬೈಲುಕುಪ್ಪೆಗೆ ಆಗಮಿಸಿದ ಟಿಬೆಟ್‌ ಧರ್ಮಗುರು ದಲೈಲಾಮ

ಮೈಸೂರು: ಟಿಬೆಟ್‌ ಧರ್ಮಗುರು ದಲೈಲಾಮ ಅವರಿಂದು ವಿಶ್ರಾಂತಿಗೆಂದು ಬೈಲುಕುಪ್ಪೆಗೆ ಆಗಮಿಸಿದ್ದಾರೆ.

ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿಬೇಟನ್‌ ಪ್ರಾರ್ಥನಾ ಮಂದಿರದ ತಾಷಿ ಲುಂಪೂ ಮೋನಾಸ್ಟ್ರಿಯಲ್ಲಿ ದಲೈಲಾಮ ಅವರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.

ದಲೈಲಾಮ ಅವರು ಪ್ರಾರ್ಥನೆಯಲ್ಲಷ್ಟೇ ಟಿಬೆಟಿಯನ್‌ ಬೌದ್ಧ ಸನ್ಯಾಸಿಗಳೊಂದಿಗೆ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕ ಸಭೆ, ಸಮಾರಂಭ ಹಾಗೂ ಯಾವುದೇ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗಿದೆ.

ದಲೈಲಾಮ ಬೈಲುಕುಪ್ಪೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆಯಿಂದ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

 

 

Tags:
error: Content is protected !!