Mysore
25
overcast clouds

Social Media

ಮಂಗಳವಾರ, 14 ಜುಲೈ 2026
Light
Dark

ಲಾರಿಗೆ ಕಾರು ಡಿಕ್ಕಿ : ಮೈಸೂರು,ಬೆಂಗಳೂರಿನ ಮೂವರ ಸಾವು

Car collides with lorry

ಧಾರವಾಡ : ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಅವಘಡ ಅಣ್ಣೆಗೇರಿ ತಾಲೂಕಿನ ಭದ್ರಾಪುರ ಬಸ್‌ ನಿಲ್ದಾಣ ಸಮೀಪ ಶುಕ್ರವಾರ ನಡೆದಿದೆ.

ಮೈಸೂರಿನ ಜೆ.ಪಿ ನಗರದ ಜಯನ್‌ ಸುರೇಶನ್(‌64), ಕುವೆಂಪುನಗರದ ನಿವೃತ್ತ ಎಂಜಿನಿಯರ್‌ ಜೆ.ಮಹನ್‌ಮೋಹನ್(‌64), ಹಾಗೂ ಬೆಂಗಳೂರಿನ ಕಲ್ಯಾಣನಗರದ ಎಂಜಿನಿಯರ್‌ ಲಕ್ಷ್ಮಿನಾರಾಯಣ ನಾಗೇಂದ್ರ(62)ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಭದ್ರಾಪುರ ಬಸ್‌ ನಿಲ್ದಾಣ ಸಮೀಪ ನಿಂತಿದ್ದ ಲಾರಿಗೆ ಹುಬ್ಬಳ್ಳಿ ಕಡೆಗೆ ಸಾಗುತ್ತಿದ್ದ ಕಾರು ಗುದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:
error: Content is protected !!