ಮೈಸೂರು : ಎಚ್.ಡಿ.ಕೋಟೆ ತಾಲ್ಲೂಕಿನ ಕಾಕನಕೋಟೆ ಸಫಾರಿಯ ಪ್ರಮುಖ ಆಕರ್ಷಣೆಯಾಗಿದ್ದ ಬ್ಲಾಕ್ ಪ್ಯಾಥರ್ ಕೆಳದಿನಗಳಿಂದ ಸಫಾರಿಯಲ್ಲಿ ಕಾಣಿಸುತಿರಲಿಲ್ಲ ಆದರೇ ಮಂಗಳವಾರದ ಬೆಳಗಿನ ಸಫಾರಿಯಲ್ಲಿ ಕಾಣಿಸಿಕೊಂಡು ಪ್ರವಾಸಿಗರ ಕ್ಯಾಮೆರಾಗಳಿಗೆ ಸೆರೆಯಾಗಿದೆ.
ಈ ಹಿಂದೆಯೂ ಒಮ್ಮೆ ಕಾಡಿನಲ್ಲಿ ಮರೆಯಾಗಿದ್ದ ಈ ಭಗೀರಾ ಸಾಕಷ್ಟು ತಿಂಗಳು ನಾಪತ್ತೆಯಾಗಿದ್ದನು. ಇದರಿಂದಾಗಿ ಬ್ಲಾಕ್ ಪ್ಯಾಂಥರ್ ಈಗ ಜಾಗ ಬಿಟ್ಟು ಕಾಡಿನ ಮತ್ತೊಂದು ಭಾಗಕ್ಕೆ ಹೋಗಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಅದಾದ ಬಳಿಕವು ಏಕಾಏಕಿ ಸಫಾರಿಯಲ್ಲಿ ಕಾಣಿಸಿಕೊಂಡು ಪ್ರವಾಸಿಗರ ಕ್ಯಾಮೆರಾಗೆ ಸೆರೆಸಿಕ್ಕಿ ಮತ್ತೇ ಕೆಲದಿನಗಳ ಬಳಿಕ ಕಾಡಿನಲ್ಲಿ ಮರೆಯಾಗಿದ್ದ. ಆದರೆ ಮಂಗಳವಾರ ಬೆಳಗಿನ ಸಫಾರಿಯಲ್ಲಿ ಮತ್ತೇ ಕಾಣಿಸಿಕೊಂಡಿದ್ದಾನೆ.