Mysore
27
broken clouds
Light
Dark

ಮೈ ಟಾರ್ಪಾಲಿನ್ಸ್ ಮಾಲೀಕನಿಂದ ಹಲ್ಲೆ ಹಾಗೂ ಕೊಲೆ ಬೆದರಿಕೆ

ಮೈಸೂರು: ನಗರದ ದೇವರಾಜು ಅರಸು ರಸ್ತೆಯಲ್ಲಿರುವ ಮೈ ಟಾರ್ಪಾಲಿನ್ಸ್ ಮಾಲೀಕ, ಪಕ್ಕದಲ್ಲೇ ಇರುವ ಹಳೆಯ ಮೈಸೂರು ಟಾರ್ಪಲಿನ್ಸ್‌ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕರ ಮೇಲೆ   ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ತಮ್ಮ ವ್ಯಾ ಸಂಗದ ಖರ್ಚಿಗಾಗಿ ಅಲ್ಪಾವಧಿಯ ಕೆಲಸ ನಿಯೋಜಿಸುವ ಏಜೆನ್ಸಿ ಮೂಲಕ ಮೈಸೂರು ಟಾರ್ಪಾಲಿನ್ಸ್ ವ್ಯಾಪಾರ ಸಂಸ್ಥೆಯ ಪ್ರಚಾರಕ್ಕಾಗಿ ಅರಸು ರಸ್ತೆಯಲ್ಲಿರುವ ಪುಟ್ ಪಾತ್ ಗಳಲ್ಲಿ (Look Walker ads promotion) ಕೆಲಸ ಮಾಡುತ್ತಿದ್ದರು.

ಆದರೆ ಅದರ ಪಕ್ಕದಲ್ಲೇ ಇರುವ ಮೈ ಟಾರ್ಪಲಿನ್ಸ್‌ ಅಂಗಡಿಯ(ಮಳಿಗೆ ಸಂಖ್ಯೆ 87) ಮಾಲೀಕ ನೀವು ಇಲ್ಲಿ ಪ್ರಚಾರದ ಕೆಲಸ ಮಾಡಬೇಡಿ, ನಿಮ್ಮ ಪ್ರಚಾರದ ಕೆಲಸದಿಂದ ನಮ್ಮ ಅಂಗಡಿ(ಮೈ ಟಾರ್ಪಲಿನ್ಸ್‌)ಗೆ ಬರುವ ಗ್ರಾಹಕರು ಕಡಿಮೆ ಆಗುತ್ತಾರೆ ಎಂದು ಪ್ರಚಾರದ ಯುವಕರ ಮೇಲೆ ಸಿಟ್ಟಿನಿಂದ ಹಲ್ಲೇ ಮಾಡಿ, ಕೆಟ್ಟ ಬೈಗುಳದಿಂದ ನಿಂದಿಸಿದ್ದಾರೆ.

ಅಷ್ಟೆ ಅಲ್ಲದೇ ಸಾರ್ವಜನಿಕವಾಗಿ ಯುವಕರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ  ವೇಳೆ ಸಾರ್ವಜನಿಕರು ಯುವಕರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು  ತಡೆದಿದ್ದಾರೆ.

ಇದೀಗ ಯುವಕರ ಮೇಲೆ  ನಡೆಯುತ್ತಿದ್ದ ದೌರ್ಜನ್ಯದ ವಿಡಿಯೋ ಎಲ್ಲಡೇ ವೈರಲ್ ಆಗಿದ್ದು, ಮೈ ಟಾ‌ರ್ಪಲಿನ್ಸ್‌ ಸಂಸ್ಥೆಯ ಮಾಲೀಕನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಯುವಕರನ್ನು ವೈದೈಕೀಯ ಪರೀಕ್ಷೆಗೆ ಕಳುಹಿಸಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡುವುದಾಗಿ ಹಲ್ಲೆಗೊಳಗಾದ ಯುವಕರು ತಿಳಿಸಿದ್ದಾರೆ.