ಬೈಲಕುಪ್ಪೆ : ರೈತರು ಹೈನುಗಾರಿಕೆಯಿಂದ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪೂರಕವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗ್ರಾಪಂ ವ್ಯಾಪ್ತಿಯ ದೊಡ್ಡಹರವೆ ಒಂದನೇ ಬ್ಲಾಕ್ ಗ್ರಾಮದಲ್ಲಿ ಪಶು ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಡಂಚಿನ ಗ್ರಾಮವಾದ ದೊಡ್ಡ ಹರವೆ ೨ನೇ ಬ್ಲಾಕ್, ರಾಣಿ ಗೇಟ್, ಗಿರಿಜನರ ಹಾಡಿಗಳು ಸೇರಿದಂತೆ ಸುತ್ತಮುತ್ತ ರೈತರು ಹೈನುಗಾರಿಕೆಯನ್ನು ಉಪಕಸುಬು ಮಾಡಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರೈತರು ಸಾಕಿದ ಜಾನುವಾರುಗಳಿಗೆ ಯಾವುದೇ ಸಮಸ್ಯೆ ಬಂದರೆ ಕೂಡಲೇ ಹತ್ತಿರದಲ್ಲಿ ಪಶು ಆಸ್ಪತ್ರೆ ಇದ್ದಲ್ಲಿ ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಯೋಚಿಸಿ ಇಲಾಖೆ ವತಿಯಿಂದ ಸರ್ವೆ ಕಾರ್ಯ ನಡೆಸಿ ಜನರ ಬೇಡಿಕೆಯಂತೆ ಪಶು ಆಸ್ಪತ್ರೆ ಉದ್ಘಾಟಿಸಿದ್ದೇನೆ ಎಂದು ತಿಳಿಸಿದರು.
ಇದನ್ನು ಓದಿ: ಹಳ್ಳಿಗರ ಬೆಳ್ಳಿ ರೇಖೆಯಾಗುತ್ತಿರುವ ಹೈನುಗಾರಿಕೆ
ನಂತರ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡೋಂಗ್ರಿ ಗೆರೋಸಿಯ ಕಾಲೋನಿಯ ಜನರ ಕುಂದು ಕೊರತೆಗಳನ್ನು ಆಲಿಸಿದರು. ಕಾಲೋನಿಯಲ್ಲಿ ಕೆಲವರಿಗೆ ಮಾತ್ರ ಹಕ್ಕುಪತ್ರ ವಿತರಿಸಿದ್ದಾರೆ. ಇನ್ನುಳಿದವರಿಗೆ ಸಂಬಂಧಪಟ್ಟ ಅಧಿಕಾರಿಗಳು ಹಕ್ಕು ಪತ್ರ ನೀಡದ ಕಾರಣ ಇಲ್ಲಿಯ ಗ್ರಾಮಸ್ಥರು ವಾಸದ ಮನೆ ನಿರ್ಮಿಸಿಕೊಳ್ಳಲಾಗುತ್ತಿಲ್ಲ ಎಂದು ಸಚಿವರಿಗೆ ಗ್ರಾಮಸ್ಥರು ತಿಳಿಸಿದರು. ಆಗ ಸ್ಥಳದಲ್ಲೇ ಇದ್ದ ತಾಪಂ ಇಒ ಅವರಿಗೆ, ಸ್ಥಳ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರೆಹಮತ್ ಜಾನ್ ಬಾಬು, ಈಚೂರು ಲೋಕೇಶ್, ಚೆನ್ನಕಲ್ ಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಧನರಾಜ್, ಸಮಿ ಉಲ್ಲಾಖಾನ್, ಸುಬ್ರಹ್ಮಣ್ಯ, ಗ್ರಾಪಂ ಸದಸ್ಯರಾದ ರಾಜಯ್ಯ, ನಿಸಾರ್ ಅಹ್ಮದ್, ಬಾಲಾಜಿ, ರಘು, ಭಾರತಿ ಪ್ರಕಾಶ್, ರಾಜು, ಮುಖಂಡರುಗಳಾದ ಬಸವರಾಜ್, ಮಹಾದೇವ್, ರಾಮಸ್ವಾಮಿ, ಮಲ್ಲೇಶ, ಮೋಹನ್, ಭರತ್, ಆನಂದ್, ಶಂಕರ್, ರಿಯಾಜ್, ಚೆನ್ನಪ್ಪ, ರಾಮೇಗೌಡ, ಗೋವಿಂದಯ್ಯ, ಸಣ್ಣಯ್ಯ,ಹೊನ್ನಾಚಾರಿ, ತಹಸಿಲ್ದಾರ್ ನಿಸರ್ಗ ಪ್ರಿಯ, ಇಒ ಸುನಿಲ್, ಪಿಡಿಒ ಬೋರೇಗೌಡ, ಇತರ ಅಧಿಕಾರಿಗಳು ಹಾಜರಿದ್ದರು.





