Mysore
26
broken clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಹುಣಸೂರು ಜೋಡಿ ಕೊಲೆ ಆರೋಪಿ ಅಂದರ್

ಹುಣಸೂರು : ಹುಣಸೂರಿನಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಭಂಧಿಸಿದಂತೆ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇವಲ 485 ರೂಪಾಯಿಗಾಗಿ ಆರೋಪಿ ಇಬ್ಬರು ಅಮಾಯಕರನ್ನ ಕೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ಘಟನೆ ನಡೆದ ಪಕ್ಕದ ಬೀದಿಯ ಅಭಿಷೇಕ್ (26) ಬಂಧಿತ. ವೆಂಕಟೇಶ್ (75) ಷಣ್ಮುಖ (65) ರನ್ನ ಕೊಲೆ ಮಾಡಿದ್ದ.
ಹುಣಸೂರಿನ ಎಸ್.ಎಸ್. ಸಾಮಿಲ್‌ನಲ್ಲಿ ಕೊಲೆ ನಡೆದಿತ್ತು.ಕೊಲೆ ಮಾಡಿದ ನಂತರ ವೆಂಕಟೇಶ್ ಬಳಿ ಇದ್ದ 485 ರೂಪಾಯಿ ತೆಗೆದುಕೊಂಡು‌ ಹೋಗಿದ್ದ. ರಾಡಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದ ದೃಶ್ಯ ಸಾಮಿಲ್ ಸಿ.ಸಿ ಕ್ಯಾಮರಾ ದಲ್ಲಿ ಸೆರೆಯಾಗಿತ್ತು.

ಶ್ವಾನಗಳು ಸಹಾ ಸಾಮಿಲ್ ನಲ್ಲಿ ಸುತ್ತಾಡಿ ಅಭಿ ಮನೆ ಬಳಿ ನಿಂತಿತ್ತು.ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿಂದೆ ಹಲವು ಕಳ್ಳತನ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಈತ ದಿನ ನಿತ್ಯ ಗಂಜಾ, ಸೆಲ್ಯೂಷನ್ ಸೇದಿ ಜನರಿಗೆ ಕಿರುಕುಳ ಜಾತ್ರೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಎಂದು ಹೇಳಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!