Mysore
23
broken clouds
Light
Dark

5 ಗ್ಯಾರಂಟಿಗಳು 5-ಜಿ ಪ್ರೋಗ್ರಾಂ ಇದ್ದಾಗೆ: ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಾದ ಐದು ಗ್ಯಾರಂಟಿಗಳು ದೇಶಾದ್ಯಂತ 5ಜಿ ಪ್ರೋಗ್ರಾಂ ಎಂದೇ ಖ್ಯಾತಿಯಾಗಿವೆ. ಗ್ಯಾರಂಟಿ ಬಗ್ಗೆ ಊಹಾಪೋಹ ಬೇಡ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಮಾತೇ ಇಲ್ಲ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷೆ ಪುಪ್ಪ ಅಮರನಾಥ್‌ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಪಾಲರೇ ತನ್ನ ಭಾಷಣದಲ್ಲಿ ಗ್ಯಾರಂಟಿ ಯೋಜನೆಯಿಂದ 4.6ಕೋಟಿ ಜನರೊಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಗ್ಯಾರಂಟಿ ಯೋಜನೆಗಳ ಪಧಾದಿಕಾರಿಗಳ ನೇತೃತ್ವದಲ್ಲಿ ಜನರಿಗೆ ಯೋಜನೆಗಳು ತಲುಪಿದೆಯಾ ಎಂಬ ಬಗ್ಗೆ ಸಮಿತಿ ಮಾಡಿ ಪರಿಶೀಲನೆ ಮಾಡುವ ಚಿಂತನೆ ಇದೆ ಎಂದರು.

ಇನ್ನು ಗ್ಯಾರಂಟಿ ಯೋಜನೆಗಳನ್ನು ಯಾರಾದರೂ ದುರುಪಯೋಗ ಪಡಿಸಿಕೊಳ್ಳುವುದು ಕಂಡು ಬಂದರೆ ಟೋಲ್‌ ಫ್ರೀ ನಂಬರ್‌ 8277000555 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ತಿಳಿಸಿದರು.

ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿ ಬಡಜನರಿಗೆ ನೆರವಾಗುತ್ತಿದೆ. ಗೃಹಲಕ್ಷ್ಮಿಗೆ ಕೆಲ ತಾಂತ್ರಿಕ ಸಮಸ್ಯೆಯಿಂದ ದೋಷ ಉಂಟಾಗಿತ್ತು. ಇದೀಗ ಅದು ಕೂಡ ಸರಿಯಾಗಿದ್ದು, ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಹೋಗ್ತಾ ಇದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್‌ ಕುಮಾರ್‌, ಕ ಮಾರುತಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.