Mysore
16
clear sky

Social Media

ಮಂಗಳವಾರ, 20 ಜನವರಿ 2026
Light
Dark

42 ದಿನಗಳಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ 22 ಹುಲಿ ಸೆರೆ: ಡಿಸಿಎಫ್‌ ಪರಮೇಶ್‌

ಮೈಸೂರು: ಜಿಲ್ಲಾ ವ್ಯಾಪ್ತಿಯಲ್ಲಿ ಕಾಡಿನಿಂದ ನಾಡಿಗೆ ಬಂದಿದ್ದ 22 ಹುಲಿಗಳನ್ನು 42 ದಿನಗಳಲ್ಲಿ ಸೆರೆ ಹಿಡಿಯಲಾಗಿದೆ ಎಂದು ಮೈಸೂರು ವಿಭಾಗದ ಡಿಸಿಎಫ್‌ ಪರಮೇಶ್‌ ಹೇಳಿದ್ದಾರೆ.

42 ದಿನಗಳಲ್ಲಿ 12 ಮರಿ ಹುಲಿ, 7 ಗಂಡು ಹುಲಿ, ಮೂರು ಹೆಣ್ಣು ಹುಲಿಗಳು ಸೆರೆಯಾಗಿವೆ. ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು ಹಾಗೂ ಹುಣಸೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಈ ಹುಲಿಗಳು ಉಪಟಳ ನೀಡುತ್ತಿದ್ದವು.

ಇದನ್ನು ಓದಿ: ಮಾಲ್ದಾರೆ ವ್ಯಾಪ್ತಿಯಲ್ಲಿ ಆತಂಕ ಸೃಷ್ಟಿಸಿದ ಹುಲಿ 

ಹುಲಿಯನ್ನು ಹಿಡಿಯಲು ಇಲಾಖೆಯಲ್ಲಿ ಎಲ್ಲಾ ರೀತಿಯ ಸಲಕರಣೆಗಳಿವೆ. ಮುಖ್ಯವಾಗಿ ಡ್ರೋನ್‌, ಜನ ಮತ್ತು ಪೊಲೀಸರ ಸಹಕಾರ ಇದ್ದರೆ ಮಾತ್ರ ಕಾರ್ಯಚರಣೆ ಯಶಸ್ವಿಯಾಗುತ್ತದೆ.

ಹಿಡಿದಿರುವ ಹುಲಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ಬಿಡಲಾಗಿದೆ. ವೈದ್ಯರ ಸಲಹೆಯನ್ನು ಆಧರಿಸಿ ಹುಲಿಗಳನ್ನು ಕಾಡಿಗೆ ಮರಳಿ ಬಿಡುಗ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Tags:
error: Content is protected !!