ಮೈಸೂರು: ಜ.18ರಂದು ಮೈಸೂರು ವಿಶ್ವವಿದ್ಯಾನಿಲಯದ 105ನೇ ಘಟಿಕೋತ್ಸವ ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್‌ನ ಸಿಂಡಿಕೇಟ್ ಹಾಲ್‌ನಲ್ಲಿ ನಡೆಯಲಿದೆ. ಅಂದಿನ ದಿನ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಮೈಸೂರು ವಿವಿಯ ಕುಲಪತಿ ಡಾ. ಲೋಕನಾಥ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಮಾಜಿ ಸಂಸದ ಡಾ. ಎ.ಸಿ. ಷಣ್ಮುಗಂ, ಸಾರಿಗೆ ಮತ್ತು ಸಂಚಾರ ಇಂಜಿನಿಯರ್ ಉಪಾದ್ಯಕ್ಷ ಡಾ. ಬಾಬು ಕೆ ವಿರೇಗೌಡ, ಗ್ಲೋಬಲ್ ಸಿಇಒ ಮತ್ತು ಮ್ಯಾನೇಜರ್ ಶಾಹೀನ್ ಮಜೀದ್‌ರಿಗೆ ಗೌರಾ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
ಕಳೆದ ಬಾರಿ ಸುಧಾಮೂರ್ತಿ ಅವರಿಗೆ ಗೌರವ ಡಾಕ್ರೇಟ್ ನೀಡಲು ತೀರ್ಮಾನಿಸಿತ್ತು. ಆದರೆ ಅವರು ಸ್ವೀಕರಿಸಿರಲಿಲ್ಲ. ಈ ಬಾರಿಯ ಘಟಿಕೋತ್ಸವದಲ್ಲಿ ಅವರು ಗೌರವ ಡಾಕ್ಟರೇಟ್ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ವಾರ್ಷಿಕ ಘಟಿಕೋತ್ಸವದಲ್ಲಿ 31,689 ವಿದ್ಯಾರ್ಥಿಗಳು ಪದವಿಗಳನ್ನು ಪಡೆದುಕೊಳ್ಳಲಿದ್ದಾರೆ. 140 ಪುರುಷರು, 164 ಮಹಿಳಾ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರಧಾನ ಮಾಡಲಾಗುತ್ತದೆ. 6300 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಧಾನ ಮಾಡಲಾಗುತ್ತದೆ. 413 ಚಿನ್ನದ ಪದಕಗಳು, 208 ನಗದು ಬಹುಮಾನವನ್ನು 216 ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. 25,085 ವಿದ್ಯಾರ್ಥಿಗಳು ಸ್ನಾತಕ ಪದವಿಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.