Mysore
27
broken clouds

Social Media

ಮಂಗಳವಾರ, 13 ಅಕ್ಟೋಬರ್ 2026
Light
Dark

ದೇಶದ ಅತ್ಯುತ್ತಮ ಮೃಗಾಲಯ ಸಾಲಿನಲ್ಲಿ ಮೈಸೂರಿಗೆ ಮೂರನೇ ಸ್ಥಾನ

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಚಾಮ ರಾಜೇಂದ್ರ ಮೃಗಾಲಯಕ್ಕೆ ದೇಶದ ಮೂರನೇ ಅತ್ಯುತ್ತಮ ಮೃಗಾಲಯ ಎಂದು ಪ್ರಶಸ್ತಿ ಲಭಿಸಿದೆ.

ಕೇಂದ್ರ ಮೃಗಾಲಯ ಪ್ರಾಧಿಕಾರ (CZA) ದೇಶದ ಅತ್ಯುತ್ತಮ ಮೃಗಾಲಯಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಡಾರ್ಜಲಿಂಗ್ ಮೃಗಾಲಯ ಪ್ರಥಮ ಸ್ಥಾನದಲ್ಲಿದೆ (ಶೇ 83), ಚೆನ್ನೈ ಮೃಗಾಲಯ ದ್ವಿತೀಯ ಸ್ಥಾನ (ಶೇ 82), ನಂತರ ಸ್ಥಾನದಲ್ಲಿ ಮೈಸೂರು ಮೂರನೇ ಸ್ಥಾನದಲ್ಲಿದೆ (ಶೇ 80) ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್ ಅವರು ಆಂದೋಲನಕ್ಕೆ ತಿಳಿಸಿದ್ದಾರೆ.

ಕೇಂದ್ರ ಮೃಗಾಲಯದ ಪ್ರಾಧಿಕಾರದ ಅಧಿಕಾರಿಗಳ ತಂಡ ಕೆಲವು ಮಾನದಂಡಗಳನ್ನು ಆಧರಿಸಿ ದೇಶದ ಎಲ್ಲ ಮೃಗಾಲಯಗಳಿಂದ ಮಾಹಿತಿ ಪಡೆದಿತ್ತು. ಅಲ್ಲದೆ ಇಲ್ಲಿಗೂ ಭೇಟಿ ನೀಡಿತ್ತು ಇದರಲ್ಲಿ ಸಂಶೋಧನೆ ವಿಚಾರವಾಗಿ ಡಾರ್ಜಲಿಂಗ್ ಹಾಗೂ ಚೆನ್ನೈ ಮೃಗಾಲಯಗಳು ಉತ್ತಮ ಸಾಧನೆ ಮಾಡಿರುವುದರಿಂದ ಕ್ರಮವಾಗಿ ಮೊದಲನೇ ಮತ್ತು ಎರಡನೇ ಸ್ಥಾನವನ್ನು ಪಡೆದುಕೊಂಡಿವೆ. ಪ್ರಶಸ್ತಿಗಳ ವಿವರ ಇನ್ನಷ್ಟು ಬರಬೇಕಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!