Mysore
26
scattered clouds

Social Media

ಭಾನುವಾರ, 16 ಮಾರ್ಚ್ 2025
Light
Dark

ಮೈಸೂರು : ಆ. 29ಕ್ಕೆ ಹಾಕಿ ಮಾಂತ್ರಿಕನ ಸ್ಮರಣೆ

ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ರಾಷ್ಟ್ರೀಯ ಕ್ರೀಡಾದಿನ

ಮೈಸೂರು : ಕ್ರೀಡಾ ಸಂಸ್ಕೃತಿಯನ್ನು ಇಂದಿನ ಯುವ ಜನತೆಯಲ್ಲಿ ಹೆಚ್ಚಿಸುವ ಮತ್ತು ಪ್ರೋತ್ಸಾಹಿಸುವ ಸಲುವಾಗಿ ಶ್ರೇಷ್ಠ ಹಾಕಿ ಪಟು ಮೇಜರ್‌ ಧ್ಯಾನ್‌ ಚಂದ್‌ ಅವರ ಸ್ಮರಣಾರ್ಥವಾಗಿ ಇದೇ ತಿಂಗಳ ಆ. 29 ರಂದು ನಗರದ ಯಾದವಗಿರಿಯಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಣೆ ಮಾಡಲಾಗುತ್ತಿದೆ. 

ಹಾಕಿ ಮಾಂತ್ರಿಕ ಧ್ಯಾನ ಚಂದ್‌ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ  ವ್ಯವಹಾರ ವಿಭಾಗವು ಈ ಆಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ meet the champion ಎಂಬ ವಿಶೇಷ ಕಾರ್ಯಕ್ರಮವನ್ನು ಸಹ ಭಾರತೀಯ ಕ್ರೀಡಾ ಪ್ರಾಧಿಕಾರಿವು ಆಯೋಜಿಸಿದೆ. ಈ ಕಾರ್ಯಕ್ರಮವು ಭಾರತದಾದ್ಯಂತ ಏಕ ಕಾಲದಲ್ಲಿ 25 ಸ್ಥಳಗಳಲ್ಲಿ ಕಾರ್ಯಕ್ರಮವು ಬೆಳಿಗ್ಗೆ 10 ರಿಂದ 11.30 ರವರೆಗೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಾಂಪಿಯನ್‌ ಕ್ರೀಡಾಪಟು ಮತ್ತು ಅಂತರರಾಷ್ಟ್ರೀಯ ಪ್ಯಾರಾ ಈಜುಗಾರರಾದ ನಿರಂಜನ್‌ ಮುಕುಂದನ್‌ ಅವರು ಭಾಗವಹಿಸಲಿದ್ದಾರೆ. ಆ ದಿನ ಶಾಲೆಯ ವಿದ್ಯಾರ್ಥಿಗಳು ಭವ್ಯ ಸ್ವಾಗತವನ್ನು ಕೋರಲಿದ್ದಾರೆ.ನಂತರ ಈಜುಕೊಳದ ಬಳಿ ಹಲವು ಈಜು ಪಟುಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶನ ಮಾಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳ ಕುರಿತು ಭಾಷಣ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.ಇದರ ಜೊತೆಗೆ ಕ್ರೀಡೆ ಸಂಬಂಧಿಸಿದಂತೆ  ಪ್ರಶ್ನಾವಳಿ ಕಾರ್ಯಕ್ರಮವು ನಡೆಯಲಿದೆ. ವಿಜೇತರಾದ ಒಟ್ಟು ಐವರು ವಿದ್ಯಾರ್ಥಿಗಳಿಗೆ ಅತಿಥಿಗಳ ಹಸ್ತಾಕ್ಷರ ಹೊಂದಿರುವ ಒಂದು ಒಲಂಪಿಕ್‌ ಜರ್ಸಿಯನ್ನು ಬಹುಮಾನವಾಗಿ ನೀಡಲಾಗುವುದು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ