ಸಿಆರ್‌ಎಸ್, ಸುರೇಶ್‌ಗೌಡ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿ: ಶಿವರಾಮೇಗೌಡ ಸವಾಲು
ಮದ್ದೂರು: ಮಾಜಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಸುರೇಶ್‌ಗೌಡ ಮತ್ತು ನಾನು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣಾ ಅಖಾಡಕ್ಕಿಳಿದರೆ ಹೆಚ್ಚಿನ ಮತಗಳಿಂದ ಜಯಶೀಲರಾಗದಿದ್ದಲ್ಲಿ ಶಿರಶ್ಚೇದನ ಮಾಡಿಕೊಳ್ಳುವುದಾಗಿ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಹೋಬಳಿಯ ಬೋಳಾರೆ ಗ್ರಾಮದಲ್ಲಿ ಪ್ರವಾಸ ಕೈಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕ ಸುರೇಶ್‌ಗೌಡ ಕಾಂಗ್ರೆಸ್ ಮತ್ತು ಜಾ.ದಳದಿಂದ ಹೊರಬಂದು ನನ್ನೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಲ್ಲಿ ತಾನು ಹೆಚ್ಚಿನ ಮತಗಳ ಅಂತದಿAದ ಗೆಲುವಿನ ನಗೆ ಬೀರಲಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಾ.ದಳದಿಂದ ಯಾರೇ ಅಭ್ಯರ್ಥಿಯಾದರೂ ಗೆಲುವು ಕಾಣಲಿದ್ದು, ಸುರೇಶ್‌ಗೌಡರ ಬಿಟ್ಟರೆ ಯಾರು ಬೇಕಾದರೂ ಪಕ್ಷದಿಂದ ಗೆಲುವು ಸಾಧಿಸಲಿದ್ದು, ಶಾಸಕರು ಪಕ್ಷೇತರವಾಗಿ ನಿಂತು ನನ್ನನ್ನು ಸೋಲಿಸಲು ಸಾಧ್ಯವೇ ಎಂದು ಸವಾಲೆಸೆದರು.
ನಾನು ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಕಾಂಗ್ರೆಸ್, ಜಾ.ದಳ, ಬಿಜೆಪಿ ಠೇವಣಿ ತೆಗೆದುಕೊಂಡಿರಲಿಲ್ಲವೆAದ ಅವರು, ಕೇವಲ ೫ ತಿಂಗಳಲ್ಲಿ ತಮ್ಮನ್ನು ಸಂಸದ ಸ್ಥಾನದಿಂದ ಕಿತ್ತು ಹಾಕಿದ್ದು, ನಾನು ಏನು ಅನ್ಯಾಯ ಮಾಡಿದ್ದೆ ಎಂದು ಪ್ರಶ್ನಿಸಿದರು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕಿಳಿಯುವುದು ಶತ ಸಿದ್ಧವಾಗಿದ್ದು, ಕ್ಷೇತ್ರದ ಮತದಾರರು ತನ್ನ ಕೈಹಿಡಿಯುವ ಮೂಲಕ ನಿಮ್ಮಗಳ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮನವಿ ಮಾಡಿದರು.
ಶಾಸಕ ಸುರೇಶ್‌ಗೌಡ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದು, ಬೇನಾಮಿ ಕಂಪನಿಗಳನ್ನು ಹುಟ್ಟು ಹಾಕುವ ಮೂಲಕ ಹಲವಾರು ಅವ್ಯವಹಾರಗಳಲ್ಲಿ ತೊಡಗಿದ್ದು, ಸುಮಾರು ೩೦೦ ಕೋಟಿಗೂ ಅಧಿಕ ಅವ್ಯವಹಾರಗಳು ನಡೆದಿದೆ. ಭಟ್ಟಂಗಿಗಳು ಕ್ಷೇತ್ರದಲ್ಲಿದ್ದು ಶಾಸಕರ ಪರ ನಿಂತು ಅಭಿವೃದ್ಧಿ ಕಾರ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ನಾಗಮಂಗಲ ಕ್ಷೇತ್ರಕ್ಕೆ ಸುಮಾರು ೧೫೦೦ ಕೋಟಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ಕೆಲ ಪೆಡಂಭೂತ ಇಟ್ಟುಕೊಂಡು ವಿಷವರ್ತುಲ ನಿರ್ಮಿಸಿಕೊಂಡು ಮತ್ತು ಬೇನಾಮಿ ಕಂಪನಿಗಳನ್ನು ನಿರ್ಮಿಸಿ ಗುತ್ತಿಗೆದಾರರೊಂದಿಗೆ ಗುರುತಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ನಾಗಮಂಗಲ ಕ್ಷೇತ್ರದ ಜನರ ಮತ ಪಡೆದಿರುವ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸಿಕೊಳ್ಳದೆ ಸ್ವಂತ ಬಳಕೆಗೆ ಮುಂದಾಗಿದ್ದು ಇದರಿಂದ ಹೊರಬಂದು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ತಾವು ೫ ವರ್ಷಗಳ ಕಾಲ ಸಂಸದರಾಗಿದ್ದಲ್ಲಿ ಪ್ರಧಾನಿ ಹಾಗೂ ಸಂಬAಧಿಸಿದ ಸಚಿವರ ಕಾಲು ಹಿಡಿದು ಪ್ರತಿ ಗ್ರಾಮಕ್ಕೂ ಸಮುದಾಯ ಭವನ ಇನ್ನಿತರೆ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದುದ್ದಾಗಿ ತಿಳಿಸಿದ ಅವರು, ೫ ತಿಂಗಳ ಸಂಸದರಾಗಿದ್ದ ವೇಳೆ ಮದ್ದೂರು ಕ್ಷೇತ್ರಕ್ಕೆ ಪಾಸ್‌ಪೋರ್ಟ್ ಕೇಂದ್ರವನ್ನು ತಂದಿದ್ದಾಗಿ ಹೇಳಿದರು.
ತಾಲ್ಲೂಕಿನ ಕೆ.ಮಲ್ಲಿಗೆ, ಬೋಳಾರೆ, ತರಮನಕಟ್ಟೆ, ಕಾಲೋನಿ, ಕರೀಗೌಡನಕೊಪ್ಪಲು, ಜೋಗಿ ಕೊಪ್ಪಲು, ಗಟ್ಟಹಳ್ಳಿ, ಯಡವನಹಳ್ಳಿ, ಕೌಡ್ಲೆ, ಕೋಡಿನಾಗನಹಳ್ಳಿ ಇನ್ನಿತರೆ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರು, ಬೆಂಬಲಿಗರೊAದಿಗೆ ಚರ್ಚಿಸಿ ಮುಂದಿನ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವAತೆ ಕೋರಿದರು.
ಈ ಸಂದರ್ಭ ಯುವ ಮುಖಂಡ ಚೇತನ್ ಶಿವರಾಮೇಗೌಡ, ಮುಖಂಡರಾದ ರಮೇಶ್, ಪುಟ್ಟಸ್ವಾಮಿ, ಸತೀಶ್, ಬೆಟ್ಟಸ್ವಾಮಿ, ಪುಟ್ಟಸ್ವಾಮಿ, ಕಾಳಯ್ಯ ಇತರರಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Previous ArticleLPG ಸಿಲಿಂಡರ್ ಗೆ ಮತ್ತೆ ಸಬ್ಸಿಡಿ ?