Mysore
21
scattered clouds

Social Media

ಸೋಮವಾರ, 15 ಜೂನ್ 2026
Light
Dark

ಮೇಲುಕೋಟೆ ದೇವಾಲಯಗಳಲ್ಲಿ 42.02 ಹುಂಡಿ ಕಾಣಿಕೆ ಸಂಗ್ರಹ

ಮೇಲುಕೋಟೆ: ಇಲ್ಲಿನ ಚೆಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳಿಂದ ತ್ರೈಮಾಸಿಕ ಅವಧಿಯಲ್ಲಿ  42,02,955  ಲಕ್ಷ ರೂ. ಹುಂಡಿಕಾಣಿಕೆ ಸಂಗ್ರಹವಾಗಿದೆ.

ಮಂಗಳವಾರ ಯೋಗನರಸಿಂಹಸ್ವಾಮಿ ಮತ್ತು ಬುಧವಾರ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಹುಂಡಿಗಳನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಸಮಕ್ಷಮದಲ್ಲಿ ತೆರೆದು ಎಣಿಕೆ ಮಾಡಲಾಯಿತು.

ಯೋಗಾನರಸಿಂಹಸ್ವಾಮಿ ಬೆಟ್ಟದ ದೇವಾಲಯದಲ್ಲಿ ೧೦,೩೯,೦೭೬ ರೂ., ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ೩೧,೬೩,೮೭೯ ರೂ. ಸೇರಿ ಒಟ್ಟು ೪೨,೦೨,೯೫೫ ರೂ. ನಗದು ೨೨ಗ್ರಾಂ ಚಿನ್ನ ೭೦೯ಗ್ರಾಂ ಬೆಳ್ಳಿ ಸಂಗ್ರವಾಗಿದೆ. ಪ್ರತಿ ಸಲಕ್ಕಿಂತ ಈ ಸಲ ಹುಂಡಿಯ ಕಾಣಿಕೆ ಸಂಗ್ರಹ ಹೆಚ್ಚಳವಾಗಿದೆ. ಹುಂಡಿಯ ಜೊತೆಗೆ ಇ-ಹುಂಡಿಯಲ್ಲೂ ಭಕ್ತರು ಕಾಣಿಕೆ ಸಲ್ಲಿಸಿದ್ದಾರೆ.

ಹುಂಡಿಗೆ ಭಕ್ತರು ಸುಲಭವಾಗಿ ಹೆಚ್ಚಿನ ಕಾಣಿಕೆ ಹಾಕಲು ಅನುವಾಗುವಂತೆ ಹುಂಡಿಗಳನ್ನು ಇಟ್ಟು ದೇವಾಲಯದ ಆದಾಯ ಹೆಚ್ಚಸಲು ಶ್ರಮಿಸಲಾಗುತ್ತದೆ ಎಂದು ಇಒ ಮಹೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹುಂಡಿ ಎಣಿಕೆಯಲ್ಲಿ ಸ್ಥಳೀಯ ಎಸ್‌ಬಿಐ ವ್ಯವಸ್ಥಾಪಕರು ಮತ್ತು ಸಿಬ್ಬಂದಿ, ಸ್ರೀತ್ತೃಶಕ್ತಿಸಂಘದ ಕಾರ್ಯಕರ್ತರು ದೇವಾಲಯದ ಸಿಬ್ಬಂದಿ ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!