Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮಂಡ್ಯ: ಪ್ರಿಯತಮೆಯನ್ನು ಕೊಂದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಯುವಕ

ಮಂಡ್ಯ: ಯುವಕನೋರ್ವ ಪ್ರಿಯತಮೆಯನ್ನು ಕೊಂದು ತನ್ನ ಜಮೀನಿನಲ್ಲೇ ಶವ ಬಚ್ಚಿಟ್ಟ ಘಟನೆ ಮಂಡ್ಯದ ಕರೋಟಿ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಪ್ರೀತಿ ಎಂಬುವವರೇ ಹತ್ಯೆಯಾದ ಮಹಿಳೆಯಾಗಿದ್ದಾರೆ. ಪುನೀತ್‌ ಎಂಬಾತನೇ ಕೊಲೆಮಾಡಿದ ಆರೋಪಿಯಾಗಿದ್ದಾನೆ.

ಪ್ರೀತಿಗೆ ಮದುವೆಯಾಗಿ ಮಕ್ಕಳಿದ್ದರೂ ಪುನೀತ್‌ ಹಿಂದೆ ಬಿದ್ದಿದ್ದಳು. ಕಳೆದ ಭಾನುವಾರ ಮೈಸೂರು, ಮಂಡ್ಯ ಎಂದು ಟ್ರಿಪ್‌ ಹೋಗಿದ್ದ ಇಬ್ಬರು ಜಾಲಿಯಾಗಿ ಸಮಯ ಕಳೆದಿದ್ದರು.

ನಂತರ ಏನಾಯ್ತೋ ಗೊತ್ತಿಲ್ಲ. ಕೆ.ಆರ್.‌ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ. ನಂತರ ಈತ ಆಕೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿ ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟು ಪರಾರಿಯಾಗಿದ್ದಾನೆ.

ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪುನೀತ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಆರೋಪಿ ಪುನೀತ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದು, ಪ್ರೀತಿ ಮದುವೆಯಾಗಿ ಮಕ್ಕಳಿದ್ದರೂ ಪುನೀತ್‌ ಹಿಂದೆ ಬಿದ್ದು ದುರಂತ ಅಂತ್ಯ ಕಂಡಿದ್ದಾಳೆ.

Tags:
error: Content is protected !!