ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಮತಾ (35) ಮೃತ ಮಹಿಳೆಯಾಗಿದ್ದಾರೆ.
ಘಟನೆ ವಿವರ :
ಪಾಲಹಳ್ಳಿ ಗ್ರಾಮದ ಬಳಿ ಇರುವ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆಗೆ ಮಹಿಳೆ ಬಟ್ಟೆ ತೊಳೆಯಲು ಬಂದಿದ್ದಾರೆ. ಆದರೆ, ಕಾಲುವೆಯಲ್ಲಿ ಕೊಲೆಯಾಗಿ ಮೃತಪಟ್ಟಿರುವ ರೀತಿಯಲ್ಲಿ ಶವ ಪತ್ತೆ ಆಗಿದೆ. ಶವದ ಮೈಯಲ್ಲಿದ್ದ ಚಿನ್ನದ ಸರ, ತಾಳಿಸರ ಕಿವಿಯಲ್ಲಿದ್ದ ಓಲೆ ಬಲವಂತವಾಗಿ ಕಿತ್ತುಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಚಿನ್ನಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿರುವ ರೀತಿಯಲ್ಲಿದೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.





