Mysore
22
overcast clouds

Social Media

ಮಂಗಳವಾರ, 11 ಆಗಸ್ಟ್ 2026
Light
Dark

ಬೂದಬಾಳು ಗ್ರಾಮದ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ ಎಂ.ಆರ್.ಮಂಜುನಾಥ್

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಬೂದಬಾಳು ಕೆರೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಿದ್ದು, ಜನ ಜಾನುವಾರುಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಂಗಾನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದುಬಾಳು ಗ್ರಾಮದ ಕೆರೆಗೆ ನೀರು ತುಂಬಿಸಿರುವ ಹಿನ್ನೆಲೆಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್ ಮಂಜುನಾಥ್ ಅವರು ಇಂದು ಪೂಜೆ ಸಲ್ಲಿಸಿ ಗಾಗಿನ ಅರ್ಪಿಸಿ ಮಾತನಾಡಿದರು.

ಬಹುತೇಕ ಈ ಪ್ರದೇಶವು ಬರ ಪೀಡಿತವಾಗಿದ್ದು, ಸರಗೂರಿನ ಕಾವೇರಿ ನದಿ ಮೂಲದಿಂದ ಬೂದುಬಾಳು ಕೆರೆಗೆ ನೀರಾವರಿ ಇಲಾಖೆ ವತಿಯಿಂದ ಪೈಪ್ ಲೈನ್ ಮೂಲಕ ಸಂಪರ್ಕ ಕಲ್ಪಿಸಿ, ಕೆರೆ ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೆವು. ಅನಂತರ ಕೆರೆಯು ಸಂಪೂರ್ಣ ತುಂಬಿದ್ದು, ಇಂದು ಬೂದುಬಾಳು ಜಾತ್ರೆ ನಡೆಯುತ್ತಿರುವ ಹಿನ್ನೆಲೆ, ಬಾಗಿನ ಅರ್ಪಿಸಿದ್ದು ತುಂಬಾ ಖುಷಿಯಾಗಿದೆ. ಇದೀಗ ಕೆರೆ ತುಂಬಿರುವುದರಿಂದ ಸ್ಥಳೀಯವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು ಜನ ಜಾನುವಾರುಗಳಿಗೂ ಸಹ ತುಂಬಾ ಅನುಕೂಲವಾಗಲಿದೆ ಎಂದರು.

ಬರಗಾಲದಿಂದ ತತ್ತರಿಸುತ್ತಿದ್ದ ಈ ಭಾಗದ ರೈತರು, ಜನರೆಲ್ಲಾ ಕೆರೆಗೆ ನೀರು ತುಂಬಿದ ಹಿನ್ನೆಲೆಯಲ್ಲಿ ಸಂತೋಷಗೊಂಡು ಶಾಸಕರನ್ನು ಅಭಿನಂದಿಸಿದರು.

ಈ ವೇಳೆ ಆದಿತ್ಯಸ್ವಾಮಿಯರ್, ಜೆಡಿಎಸ್ ಮುಖಂಡರಾದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಜೆ ಶ್ರೀನಿವಾಸ್, ಶ್ರೀನಿವಾಸ್, ಡಿ ರಾಜಪ್ಪ, ಯುವ ಮುಖಂಡ ಕೃಷ್ಣ, ಸಿಂಗಾನಲ್ಲೂರು ರಾಜಣ್ಣ, ಮಂಜೇಶ್ ಗೌಡ, ವಿಜಯ್ ಕುಮಾರ್, ವೆಂಕಟೇಶ್, ಗೋಪಾಲ್ ನಾಯಕ, ಎಸ್. ಆರ್ ಮಹದೇವ್, ತಿರುಪತಿ, ಬೂದುಬಾಳು ಗ್ರಾಮದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

Tags:
error: Content is protected !!